ಕರ್ನಾಟಕದಲ್ಲಿ ಮಾತ್ರವಲ್ಲ ಅಪ್ಪುವನ್ನು ನೆನಪು ಮಾಡಿಕೊಳ್ಳುವವರು ದೇಶದ ಎಲ್ಲೆಡೆ ಇದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಸ್ಟಾರ್ ನಟ ನಟಿಯರು ಸಹ ತಮ್ಮ ಪರಮಾತ್ಮನನ್ನು ನೆನೆಸಿಕೊಳ್ಳುತ್ತಾರೆ. ಅಭಿಮಾನಿಗಳಿಂದ ದೂರ ಮಾಡಿದ ಆ ಕರಾಳ ದಿನ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಬರಲಿದೆ. ಅಪ್ಪು ಇಂದಿಗೂ ಕರುನಾಡಿನ ಪ್ರತಿಯೊಬ್ಬರ ಮನದಲ್ಲೂ ಜೀವಂತವಾಗಿದ್ದಾರೆ.
ಕರ್ನಾಟಕದಲ್ಲಿ ಮಾತ್ರವಲ್ಲ ಅಪ್ಪುವನ್ನು ನೆನಪು ಮಾಡಿಕೊಳ್ಳುವವರು ದೇಶದ ಎಲ್ಲೆಡೆ ಇದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಸ್ಟಾರ್ ನಟ ನಟಿಯರು ಸಹ ತಮ್ಮ ಪರಮಾತ್ಮನನ್ನು ನೆನೆಸಿಕೊಳ್ಳುತ್ತಾರೆ.
ತಮಿಳಿನ ಖ್ಯಾತ ನಟ ಕಾರ್ತಿಯ ಹೊಸ ಸಿನಿಮಾ ‘ಸರ್ದಾರ್’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ತೆಲುಗಿನ ಸೂಪರ್ ಸ್ಟಾರ್ ನಟ ನಾಗಾರ್ಜುನ, ಪುನೀತ್ ರಾಜ್‌ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ನಾಗಾರ್ಜುನ ನಟ ಕಾರ್ತಿ ಬಗ್ಗೆ ಮಾತನಾಡುತ್ತಾ, ”ಕಾರ್ತಿಯ ಅಣ್ಣ ಸೂರ್ಯ ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ಹೀಗೆ ಅಣ್ಣ ಸೂಪರ್ ಸ್ಟಾರ್ ಆಗಿದ್ದು, ಅಣ್ಣನ ನೆರಳಿನಿಂದ ಹೊರಬಂದು ಸ್ಟಾರ್ ಆದವರು ಕೆಲವರೇ, ಮೆಗಾಸ್ಟಾರ್ ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಹಾಗೂ ಕರ್ನಾಟಕದಲ್ಲಿ ಶಿವಣ್ಣ ಸಹೋದರ ಪುನೀತ್ ರಾಜ್‌ಕುಮಾರ್” ಎಂದು ಹೇಳಿದ್ದಾರೆ.
ದೊಡ್ಮನೆ ಕುಟುಂಬದೊಟ್ಟಿಗೆ ಅಕ್ಕಿನೇನಿ ಕುಟುಂಬಕ್ಕೆ ಬಹಳ ಒಳ್ಳೆಯ ಭಾಂದವ್ಯ ಇಟ್ಟುಕೊಂಡಿದ್ದರು. ನಾಗಾರ್ಜುನ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರು ಗೆಳೆತನ ಹೊಂದಿದ್ದರು.
ಶಿವರಾಜ್ ಕುಮಾರ್ ಅವರ ಆಪ್ತ ಗೆಳೆಯರಲ್ಲಿ ನಾಗಾರ್ಜುನ ಸಹ ಒಬ್ಬರು. ಪುನೀತ್ ನಿಧನದ ಬಳಿಕ ನಾಗಾರ್ಜುನ ಅವರು ಶಿವಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಇದೇ 28ಕ್ಕೆ ಪುನೀತ್ ರಾಜ್ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ ಪರ್ವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ಕಲಾವಿದರು ಸೇರಿದಂತೆ ಎಲ್ಲ ಭಾಷೆಯ ನಟ-ನಟಿಯರು ಆಗಮಸಿಲಿದ್ದಾರೆ. ಅಭಿಮಾನಿಗಳು ಕೂಡ ಈಗಾಗಲೇ ಅಲ್ಲಿ ನೆರೆದಿದ್ದಾರೆ.