ಕೂಗು ನಿಮ್ಮದು ಧ್ವನಿ ನಮ್ಮದು

ನಾಗನಗೌಡ ಪಾಟೀಲ್ ಗೆ ಶ್ರೇಷ್ಠ ಸಹಕಾರಿ ಬಿರುದು, ಸನ್ಮಾನ

ಹುಬ್ಬಳ್ಳಿ: ಸಹಕಾರ ಕ್ಷೆತ್ರದಲ್ಲಿಯ ಸುಭಿಕ್ಷಾ ಅರ್ಗಾನಿಕ್ ಬಹುರಾಜ್ಯ ಸಹಕಾರ ಸಂಘದ ಷೇರುದಾರ ಸದಸ್ಯರಾದ ನಾಗನಗೌಡ ಪಾಟೀಲ್ ಅವರನ್ನ ಕಲಘಟಗಿಯಲ್ಲಿ ನಡೆದ 70 ನೇ ಅಖಿಲಭಾರತ ಸಹಕಾರ ಸಪ್ತಾಹ 2023 ರ ಸಮಾರಂಭದಲ್ಲಿ ಶ್ರೇಷ್ಠ ಸಹಕಾರಿ ಎಂದು ಗುರುತಿಸಿ ಸನ್ಮಾನಿಸಲಾಯಿತು.

ರಾಜ್ಯಾದಲ್ಲಿಯ ಅನೇಕ ಸಹಕಾರ ಸಂಘಗಳ ಶೇರುದಾರ ಸದಸ್ಯನಾಗಿ ಕೆಲವು ಸಂಘಗಳಾದ ಟಿ.ಎ.ಪಿ.ಸಿ.ಎಂ.ಎಸ್. ಅಣ್ಣಿಗೇರಿ, ಯಜಮಾನ್, ದಿ. ಉಪನಾಳ ಗೂಳಪ್ಪನವರು ಸ್ಥಾಪೀಸಲ್ಪಟ್ಟ ಶ್ರೀರೇಣುಕಾದೇವಿ ರೈತರ ಗೋವಿನಜೋಳದ ಸಂಸ್ಕರಣ ಸಹಕಾರಿ ಸಂಘ, ನವಲಗುಂದ ಆಡಳಿತ ಮಂಡಳಿ ಸದಸ್ಯನಾಗಿ ಅನನ್ಯವಾಗಿ ಸೇವೆ ಸಲ್ಲಿಸುತ್ತಿರುವದನ್ನ ಪರಿಗಣಿಸಿ ಸಹಕಾರ ಇಲಾಖೆ ಗೌರಸಿದೆ.

ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿದ ಹಿರಿಯ ಸಹಕಾರಿ ಮುಖಂಡರು ಧಾರವಾಡ ಕೆ.ಸಿ.ಸಿ. ಬ್ಯಾಂಕಿನ ಮಾಜಿ ಅಧ್ಯಕ್ಷ ಬಾಪೂಗೌಡ ಡಿ. ಪಾಟೀಲ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿಗೆ ಮತ್ತು ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

error: Content is protected !!