ಕೂಗು ನಿಮ್ಮದು ಧ್ವನಿ ನಮ್ಮದು

ನಾಳೆ ಮೈಸೂರು ದಸರಾ ಹಬ್ಬಕ್ಕೆ ವಿದ್ಯುಕ್ತ ಚಾಲನೆ

ಮಂಡ್ಯ: ೨೦೨೧ರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಾಳೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮೈಸೂರಿನ ಚಾಮುಂಡಿ ತಾಯಿ ಬೆಟ್ಟದಲ್ಲಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ನಾಳೆಯಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೋವಿಡ್ ಕರಿ ನೆರಳ ನಡುವೆ ನವರಾತ್ರಿ ಸಂಭ್ರಮ ಕಳೆಗಟ್ಟಲಿದೆ. ಕಳೆದ ೨ ವರ್ಷಗಳಿಂದ ಇಡೀ ವಿಶ್ವವನ್ನೇ ಕೋವಿಡ್ ಎಂಬ ಮಹಾಮಾರಿಯು ಕಾಡುತ್ತಿದೆ.

ಆದರಿಂದ ಕೆಲವರು ಐತಿಹಾಸಿಕ ಕಾರ್ಯಕ್ರಮಗಳು ಕಳೆಗುಂದಿವೆ. ಅದೇ ರೀತಿ ಮೈಸೂರಿನ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ವೈಭವ ಕಳೆದ ವರ್ಷದಿಂದ ಕಳೆಗುಂದಿದೆ. ಕೋವಿಡ್ ನಡುವೆಯೂ ಸಹ ಐತಿಹಾಸಿಕ ಆಚರಣೆ ನಿಲ್ಲಬಾರ್ದು ಎಂಬ ಉದ್ದೇಶದಿಂದ ಈ ಬಾರಿಯೂ ದಸರಾ ಹಬ್ಬವನ್ನು ಅಂತ್ಯತ ಸರಳವಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ನಾಳೆ ಈ ಸರಳ ದಸರಾ ಮಹೋತ್ಸವಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.

ನಾಳೆ ಮುಂಜಾನೆ ೮.೧೫ ರಿಂದ ೮.೪೫ ರ ಶುಭ ಮುಹೂರ್ತದಲ್ಲಿ ಎಸ್.ಎಂ.ಕೃಷ್ಣ ಚಾಮುಂಡಿ ತಾಯಿ ಬೆಟ್ಟದಲ್ಲಿ ಬೆಳ್ಳಿ ರಥದಲ್ಲಿನ ಚಾಮುಂಡೇಶ್ವರಿ ತಾಯಿ ಉತ್ಸವ ಮೂರ್ತಿಗೆ ಪುಷ್ಪಾರ್ಚಾನೆ ಮಾಡುವ ಮೂಲಕ ೨೦೨೧ರ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲವು ಸಚಿವರು ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಕೋವಿಡ್ ಕಾರಣ ಈ ಕಾರ್ಯಕ್ರಮಕ್ಕೆ ೧೦೦ ಜನರಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದೆ. ವರ್ಚುವಲ್ ಮುಖಾಂತರ ಜನ ಸಾಮಾನ್ಯರು ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ರು. ಮುಂಜಾನೆ ಚಾಮುಂಡಿ ತಾಯಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕ ನಂತರ ಸಂಜೆ ೬ ಗಂಟೆಗೆ ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಜೊತೆಗೆ ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಲಿದ್ದಾರೆ. ನಾಳೆಯಿಂದ ೭ ದಿನಗಳ ಕಾಲ ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಕ್ಟೋಬರ್ ೧೫ ರಂದು ಜಂಬೂ ಸವಾರಿ ಮೆರವಣಿಗೆ ಮೂಲಕ ದಸರಾ ಹಬ್ಬಕ್ಕೆ ತೆರೆ ಬೀಳಲಿದೆ.

error: Content is protected !!