ಸಂಬಲ್‌ಪುರ : 100 ರೂಪಾಯಿ ನೀಡಲಿಲ್ಲ ಅನ್ನುವ ಕಾರಣಕ್ಕೆ ವ್ಯಕ್ತಿಯೋರ್ವ ವಿಶ್ವ ವಿದ್ಯಾಲಯದ ಮಾಜಿ ಕುಲ ಸಚಿವರೋರ್ವ ರನ್ನು ಕೊಲೆ ಮಾಡಿರುವ ಘಟನೆ ಒಡಿಶಾದ ಜಾರ್ಸುಗುಡಾ ಜಿಲ್ಲೆಯಲ್ಲಿ ನಡೆದಿದೆ.
ಖ್ಯಾತ ಪರಿಸರವಾದಿ, ಸಂಬಲ್‌ಪುರ ವಿಶ್ವವಿದ್ಯಾಲಯ ದ ಮಾಜಿ ಉಪಕುಲಪತಿ ಧ್ರೂಬರಾಜ್ ನಾಯಕ್ ಎಂಬವರೇ ಕೊಲೆಯಾದ ವರು. ಒಡಿಶಾದ ಜಾರ್ಸು ಗುಡಾ ಜಿಲ್ಲೆಯ ನಿವಾಸಕ್ಕೆ ಬಂದ ವ್ಯಕ್ತಿ ಯೋರ್ವ 100 ರೂಪಾಯಿ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ಆದರೆ ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ವ್ಯಕ್ತಿ ಧ್ರೂಬರಾಜ್ ನಾಯಕ್ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಮನೆಯ ಮುಂಭಾಗದಲ್ಲಿದ್ದ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಕೂಡಲೆ ನಾಯಕ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.