ಕೋಲಾರ: ಸರ್ಕಾರ ನಡೆಯುತ್ತಿಲ್ಲ ಮ್ಯಾನೇಜ್ ಮಾಡುತ್ತಿದ್ದೇವೆ ಎನ್ನುವ ಸಚಿವ ಮಾಧುಸ್ವಾಮಿ ಆಡಿಯೋ ಹೇಳಿಕೆಗೆ ತೋಟಗಾರಿಕೆ ಇಲಾಖೆಯ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ. ಕೋಲಾರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಮುನಿರತ್ನ ಅವರು, ಕೂಡಲೇ ಮಾಧುಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅವರ ಹಿರಿತನಕ್ಕೆ ಈ ರೀತಿ ಹೇಳಿಕೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಸರ್ಕಾರದಲ್ಲಿ ಮಾಧುಸ್ವಾಮಿ ಸಹ ಒಂದು ಭಾಗ ಕ್ಯಾಬಿನೆಟ್ನ ಪ್ರತಿಯೊಂದು ಅಂಶದಲ್ಲೂ ಅವರು ಭಾಗವಹಿಸುತ್ತಿದ್ದಾರೆ. ಅಂತಹ ಹೇಳಿಕೆ ನೀಡಿದ್ರೆ ಅವರು ಸಹ ಪಾಲುದಾರರಾಗಿರುತ್ತಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ರೀತಿ ಮಾತನಾಡಬಾರದು ಎಂದು ಮುನಿರತ್ನ ಅವರು ಕಿಡಿಕಾರಿದರು.