ಕೂಗು ನಿಮ್ಮದು ಧ್ವನಿ ನಮ್ಮದು

ದಿನಪತ್ರಿಕೆ ವಿತರಕರಿಗೆ ರೇಷನ್ ಕಿಟ್ ವಿತರಿಸಿದ: ವಿಶ್ವಾಸ ವೈದ್ಯ ತಂಡ

ಮುನವಳ್ಳಿ: ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಈಗಾಗಲೇ ಜೂನ್ 14 ರ ವರೆಗೆ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಕಡಿಮೆಯಾಗದ ಹಿನ್ನೆಲೆ ಲಾಕ್ ಡೌನ್ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ. ಈ ಲಾಕ್ ಡೌನ್ ನಿಂದ ಜನಸಾಮಾನ್ಯರ ಬದುಕು ತತ್ತರಿಸಿ ಹೊಗಿದ್ದು, ಇದಕ್ಕೆ ಪತ್ರಿಕಾ ವಿತರಕರು ಕೂಡ ಹೊರತಾಗಿಲ್ಲ. ನಿತ್ಯ ಬೆಳಿಗ್ಗೆ ಎದ್ದು ಎಂತದ್ದೆ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಮನೆ ಮನೆಗೆ ತೆರಳಿ ಪತ್ರಿಕೆ ವಿತರಿಸುವ ಅನಿವಾರ್ಯತೆ ಇವರದ್ದು. ಹೀಗಿರುವಾಗ ಇವತ್ತು ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ನೇತತ್ವದಲ್ಲಿ ಮುನವಳ್ಳಿ ಪಟ್ಟಣದಲ್ಲಿ ದಿನಪತ್ರಿಕೆ ವಿತರಣೆ ಮಾಡುವ ಮಕ್ಕಳಿಗೆ ರೇಶನ ಕಿಟ್ ವಿತರಣೆ ಮಾಡಲಾಯಿತು. ಕರೋನಾ ಹಿನ್ನಲೆಯಲ್ಲಿ ಕಳೆದ ಹಲವು ದಿನಗಳಿಂದ ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ತಮ್ಮ ತಂಡದಿಂದ ಬಡವರಿಗೆ ಆಹಾರ ಕಿಟ್ ವಿತರಿಸುವ ಕಾರ್ಯದಲ್ಲಿ ವಿಶ್ವಾಸ್ ವೈದ್ಯ ಮತ್ತು ತಂಡದವರು ನಿರತರಾಗಿದ್ದಾರೆ.

ಈ ಸಂದರ್ಭದಲ್ಲಿ ಸಿ.ಬಿ.ಬಾಳಿ, ಪುರಸಭೆ ಸದಸ್ಯರಾದ ಶ್ರೀಶೈಲ ಹಂಜಿ, ಪತ್ರಿಕಾ ವರದಿಗಾರರಾದ ತಾನಾಜಿ ಮುರನಕರ, ಈರಣ್ಣ ತುಳಜನ್ನವರ, ದುರಗಪ್ಪ ಕಿನ್ನೂರಿ, ಪ್ರಸಾದ ವಿರಪಯ್ಯನವರಮಠ, ಚೇತನ ಚಿಕ್ಕುಂಬಿ, ಭೀಮಸಿ ಕಾಮನ್ನವರ, ಮಹೇಶ್ ಮಾವಿನಕಟ್ಟಿ, ಚೇತನ ಕಾಮನ್ನವರ, ದಿಲಾವರ ಮುಗಟಖಾನ ಉಪಸ್ಥಿತರಿದ್ದರು.

error: Content is protected !!