ಮುನವಳ್ಳಿ: ಭಾವ್ಯೆಕತೆಯ ಪ್ರತೀಕದಂತಿರುವ
ಮುನವಳ್ಳಿಯ ಪರಮ ಪೂಜ್ಯ ಶ್ರೀ ಸೋಮಶೇಖರ ಮಠದ ಶ್ರೀಗಳಾದ ಶ್ರೀ ಮುರಘೇಂದ್ರ ಮಹಾ ಸ್ವಾಮಿಗಳ 47 ನೇ ಜನ್ಮದಿನದ ಅಂಗವಾಗಿ ಮುನವಳ್ಳಿಯ ಶ್ರೀ ಸೋಮಶೇಖರ ಮಠದಲ್ಲಿ ಸಸಿ ವಿತರಣೆ ಮತ್ತು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಶ್ರೀಗಳ ಭಕ್ತರು ಶ್ರೀಗಳಿಗೆ ಹುಟ್ಟು ಹಬ್ಬದ ಶುಭ ಕೋರಿ ಸಸಿ ವಿತರಣೆ ಮಾಡಿದರು. ಈ ವೇಳೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ.ರವೀಂದ್ರ ಯಲಿಗಾರ.ರಮೇಶ ಗೋಮಾಡಿ.ಪುರಸಭೆ ಅಧ್ಯಕ್ಷ ವಿಜಯ ಅಮಠೆ ಸೇರಿದಂತೆ ಅನೇಕರು ಇದ್ದರು.