ಬೆಂಗಳೂರು: ಎರಡು ಮೂರು ದಿನದಲ್ಲಿ ನನ್ನ ನಿರ್ಧಾರವನ್ನು ಹೇಳುತ್ತೇನೆ ಎಂದು ಸಚಿವರಾದ MTB ನಾಗರಾಜ್ ಅವರು ಹೇಳಿದ್ರು. ಇನ್ನೂ ಮುಖ್ಯಮಂತ್ರಿಯನ್ನು ಭೇಟಿ ಆದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಈ ಹಿಂದೆ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ವಸತಿ ಸಚಿವನಾಗಿದ್ದೆ. ಜೊತೆಗೆ ನಾನು ಕಾಂಗ್ರೆಸ್ ಗೆ ರಾಜೀನಾಮೆಯನ್ನು ನೀಡಿ BJP ಪಕ್ಷವನ್ನು ಸೇರಿದ್ದೆ. ಹಾಗಾಗಿ ಅದಕ್ಕಿಂತ ಉನ್ನತವಾದ ಖಾತೆಯನ್ನು ನನಗೆ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಇನ್ನೂ ವಸತಿ ಖಾತೆಗಿಂತ ಉನ್ನತವಾದ ಖಾತೆ ಯಾವುದು ಅನ್ನೋದು ಮುಖ್ಯಮಂತ್ರಿಗೆ ಗೊತ್ತಿದೆ. ಜೊತೆಗೆ ಲೋಕೋಪಯೋಗಿ, ಇಂಧನ, ಸಾರಿಗೆ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಇಲಾಖೆಗಳನ್ನು ನನಗೆ ಕೊಡಬಹುದಿತ್ತು.
ಇನ್ನೂ ವಸತಿ ಖಾತೆಗಿಂತ ಉನ್ನತವಾದ ಖಾತೆ ಯಾವುದು ಅನ್ನೋದು ಮುಖ್ಯಮಂತ್ರಿಗೆ ಗೊತ್ತಿದೆ. ಆದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆ ಖಾತೆಯನ್ನು ನೀಡಿದ್ದಾರೆ ಎಂದು MTB ನಾಗರಾಜ್ ಅವರು ಬೇಸರವನ್ನು ವ್ಯಕ್ತಪಡಿಸಿದ್ರು.
ಇನ್ನೂ ಖಾತೆಯನ್ನು ಬದಲಿಸುತ್ತಾರೆ ಎನ್ನುವ ವಿಶ್ವಾಸವು ಸಹ ನನಗಿಲ್ಲ.
ಜೊತೆಗೆ ಖಾತೆ ಹಂಚಿಕೆ ಯಿಂದಾಗಿ ನನಗೆ ಬೇಸರವಾಗಿದ್ರೆ ವರಿಷ್ಠರ ಜೊತೆ ಮಾತನಾಡುತ್ತೇನೆ. ಇನ್ನೂ ಮುಂದಿನ ದಿನಗಳಲ್ಲಿ ಮಾತನಾಡಿ ನಿರ್ಧಾರ ಮಾಡೋಣ ಎಂದು ಮುಖ್ಯಮಂತ್ರಿಯವರು ನನಗೆ ಭರವಸೆ ನೀಡಿದ್ದಾರೆ. ಹಾಗಾಗಿ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಾತುಗಳನ್ನು ಒಪ್ಪಿಕೊಳ್ಳುತ್ತೇನೆ ಎಂದ್ರು ಜೊತೆಗೆ ಇನ್ನೂ ಎರಡು ಮೂರು ದಿನದಲ್ಲಿ ನನ್ನ ನಿರ್ಧಾರವನ್ನು ಹೇಳುತ್ತೇನೆ. ಇನ್ನೂ ನನ್ನ ಹೇಳಿಕೆಗಳಿಗೆ ನಾನು ಬದ್ಧನಾಗಿರುತ್ತೇನೆ. ಜೊತೆಗೆ ಸುಮಾರು ೩೦ ಕ್ಕೂ ಅಧಿಕ ನಿಮಿಷಗಳ ಕಾಲ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ, ಅವರು ಸಹ ನನಗೆ ಕೆಲ ಸಲಹೆಗಳನ್ನು ನೀಡಿದ್ರು. ಇನ್ನೂ BJP ಸರ್ಕಾರ ರಚನೆಗೆ ಕಾರಣವಾದ ೧೭ ಜನರಲ್ಲಿ ಕೇವಲ ಮೂವರಿಗೆ ಮಾತ್ರ ಒಳ್ಳೆಯ ಖಾತೆಯನ್ನು ನೀಡಿರುವುದು ನನಗೆ ಬೇಸರವಾಗಿದೆ. ಎಂದ್ರು.