ಮುಂಬೈ: ಹೌದು KGF ಚಿತ್ರದಲ್ಲಿ ಗಲಿ ಗಲಿ ಎಂದು ಸೊಂಟ ಬಳುಕಿಸಿದ ಬಾಲಿವುಡ್ ನಟಿ ಮೌನಿ ರಾಯ್ ಅವರು ಇದೀಗ ಹಾಟ್ ಫೋಟೋ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಈಗ ಸಖತ್ ಸೌಂಡ್ ಮಾಡುತ್ತಿದ್ದಾರೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಪ್ಯಾನ್ ಇಂಡಿಯಾ ಚಿತ್ರ KGF ಸಿನಿಮಾ ಎಲ್ಲೆಡೆ ಸಖತ್ ಸೌಂಡ್ ಮಾಡಿತ್ತು. ಜೊತೆಗೆ ಆ ಸಿನಿಮಾದಲ್ಲಿ ಗಲಿ ಗಲಿ ಸಾಂಗ್ ಕೂಡಾ ಅಷ್ಟೆ ಸುದ್ದಿಯಾಗಿತ್ತು.
ಇನ್ನೂ ಈ ಹಾಡಿಗೆ ಸೊಂಟ ಬಳುಕಿಸಿದ್ದ ಬಾಲಿವುಡ್ ನಟಿ ಮೌನಿ ರಾಯ್ ಅವರು, ಅವಾಗ ಅವಾಗಾ ಫೋಟೋಶೂಟ್ ಮೂಲಕ ಸುದ್ದಿಯಾಗುತ್ತಲಿರುತ್ತಾರೆ. ಇನ್ನೂ ಈಗ ಸ್ವಿಮ್ ಸೂಟ್ ಧರಿಸಿ ಸ್ವಿಮಿಂಗ್ ಪೂಲ್ ಅಲ್ಲಿ ನಟಿ ಮೌನಿ ರಾಯ್ ಅವರು ಫೋಟೋಶೂಟ್ ಮಾಡಿಸಿದ್ದಾರೆ.
ಸದ್ಯ ಮೌನಿರಾಯ್ ಅವರ ಹಾಟ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋಗಳನ್ನು ನಟಿ ಮೌನಿ ರಾಯ್ ಹಂಚಿಕೊಂಡಿದ್ದಾರೆ. ಇನ್ನೂ ಈ ಫೋಟೋಗಳಿಗೆ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.