ಮೇ 10 ರಂದು ಕರ್ನಾಟಕದ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ವಿಡಿಯೋ ಸಂದೇಶದ ಮೂಲಕ ಕರ್ನಾಟಕದ ಜನತೆಯನ್ನು ತಲುಪುವ ಪ್ರಯತ್ನ ಮಾಡಿರುವ ಪ್ರಧಾನಿ ಮೋದಿ ಮೇ 10 ರಂದು ತಪ್ಪದೇ ಮತದಾನ ಎಂದು ಮನವಿ ಮಾಡಿದ್ದಾರೆ. ನೀವು ನನಗೆ ಸದಾ ಪ್ರೀತಿ ಕೊಟ್ಟಿದ್ದೀರಿ ಅದು ನನಗೆ ಈಶ್ವರನ ಆರ್ಶೀವಾದವಿದ್ದಂತೆ, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಎನಿಸಿಕೊಂಡಿದೆ.
ಆದಷ್ಟು ಬೇಗ ಕರ್ನಾಟಕವನ್ನು ದೇಶದ ಆರ್ಥಿಕತೆಯ ನಂಬರ್ 1 ರಾಜ್ಯವನ್ನಾಗಿ ಮಾಡಬೇಕಿದೆ. ಎಲ್ಲರ ಲಕ್ಷ್ಯ ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಎಕಾನಮಿಯತ್ತ ಕೊಂಡೊಯ್ಯುವುದಾಗಿರಬೇಕು.
ಕೊರೊನಾ ಬಳಿಕವು ದೇಶದಕ್ಕ 90 ಸಾವಿರ ಕೋಟಿಯಷ್ಟು ವಿದೇಶಿ ಬಂಡವಾಳ ಹೂಡಿಕೆಯಾಗಿದೆ, ಆದರೆ ಕಳೆದ ಸರ್ಕಾರದಲ್ಲಿ ಕೇವಲ 30 ಸಾವಿರ ಕೋಟಿಯಷ್ಟು ಮಾತ್ರ ವಿದೇಶಿ ಬಂಡವಾಳ ಹೂಡಿಕೆಯಾಗಿತ್ತು ಎಂದು ಹೇಳಿದರು.
ಬಂಡವಾಳ ಹೂಡಿಕೆ, ಕೈಗಾರಿಕೆ ಮತ್ತು ಆವಿಷ್ಕಾರದಲ್ಲಿ ಕರ್ನಾಟಕ ಪ್ರಥಮ ಸ್ಥಾನ ಪಡೆಯಬೇಕು, ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ, ಕೃಷಿಯಲ್ಲಿಯೂ ಕರ್ನಾಟಕವನ್ನು ನಂಬರ್ ಒನ್ ಮಾಡಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಕರ್ನಾಟಕವನ್ನು ನಂಬರ್ 1 ಮಾಡಲು ಮೇ 10ರಂದು ನಿಮ್ಮೆಲ್ಲರನ್ನೂ ಜವಾಬ್ದಾರಿಯುತ ನಾಗರಿಕರಾಗಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ವಿನಂತಿಸಿದ್ದಾರೆ.