ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಇಂದಿನಿಂದ 18 ವರ್ಷ ಮೇಲ್ಪಟ್ಟ ವಯಸ್ಸಿನ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಉಚಿತವಾಗಿ ನೀಡುವ ಅಭಿಯಾನವನ್ನು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಖಾನಾಪುರ ತಾಲ್ಲೂಕಿನ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು 6000 ಕೋವ್ಯಾಕ್ಸೀನ್ ನೀಡುವ ಗುರಿ ಹೊಂದಿದ್ದು, 52 % ವ್ಯಾಕ್ಸಿನ್ ನೀಡಿದ್ದು ಉಳಿದ ಗುರಿಯನ್ನು ಶೀಘ್ರ ಮುಟ್ಟಿ ಜನರನ್ನು ಕೊರೊನಾ ಅಪಾಯದಿಂದ ಕಾಪಾಡುವಲ್ಲಿ ಶ್ರಮಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.