ಕೂಗು ನಿಮ್ಮದು ಧ್ವನಿ ನಮ್ಮದು

ಉಚಗಾಂವ ಕೇಸರಿ ಕುಸ್ತಿ ಪಂದ್ಯಾವಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ

ಬೆಳಗಾವಿ: ಉಚಗಾಂವ ಗ್ರಾಮದ ಶ್ರೀ ಹನುಮಾನ ಕುಸ್ತಿ ಸಂಘದ ವತಿಯಿಂದ ಆಯೋಜಿಸಿದ್ದ ಉಚಗಾಂವ ಕೇಸರಿ ಕುಸ್ತಿ ಪಂದ್ಯಾವಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಸಂಜೆ ಚಾಲನೆಯನ್ನು ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರ ವೈವಿದ್ಯತೆಗೆ ಹೆಸರಾಗಿದ್ದು, ಕ್ರೀಡೆ ಸೇರಿದಂತೆ ಕ್ಷೇತ್ರದ ವೈಶಿಷ್ಟ್ಯಗಳಿಗೆ ಸರ್ವ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಅವುಗಳಿಗೆ ಇನ್ನಷ್ಟು ಸಹಕಾರ ನೀಡಲು ಮುಂದಿನ ದಿನಗಳಲ್ಲಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಭಾಗದ ಯುವಕರು ಅತ್ಯಂತ ಕ್ರಿಯಾಶೀಲರಾಗಿದ್ದು, ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಅದಕ್ಕೆ ತಕ್ಕ ಪ್ರೋತ್ಸಾಹ, ಸಹಕಾರ ಅವರಿಗೆ ಈ ಹಿಂದೆ ಸಿಗಲಿಲ್ಲ. ಇದಕ್ಕಾಗಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಸಧ್ಯವೇ ಆಡಳಿತಕ್ಕೆ ಬರಲಿರುವ ಕಾಂಗ್ರೆಸ್ ಸರಕಾರದಿಂದ ಅವುಗಳನ್ನು ಜಾರಿಗೊಳಿಸಲಾಗುವುದು ಎಂದು ಹೆಬ್ಬಾಳಕರ್ ತಿಳಿಸಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಜಾವೇದ ಜಮಾದಾರ, ಬಸು ತೆರಸೆ ಪದ್ಮರಾಜ ಪಾಟೀಲ, ಸೋಮನಾಥ ಪಾಟೀಲ, ರಘು ಖಂಡೆಕರ್ ನಾಣು ಕೊರಡೆ ಅಪ್ಪಾಜಿ ಜಾದವ ಎಲ್ ಡಿ ಚೌಗಲೆ ಸುನಿಲ ದೇಸಾಯಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

error: Content is protected !!