ಬೆಳಗಾವಿ: ಪ್ರವಾಹ ಹಿನ್ನಲೆಯಲ್ಲಿ ಜಿಲ್ಲೆಯ ಚಿಕ್ಕೋಡಿ ವಿಧಾನಸಭಾ ವ್ಯಾಪ್ತಿಯ ಅಂಕಲಿ, ಬಸ್ನಾಳಗಡ್ಡಿ, ಶಮನೆವಾಡಿ, ಸದಲಗಾ, ಕೇರೂರ, ಕಾಡಾಪೂರ ಸೇರಿದಂತೆ ಚಿಕ್ಕೋಡಿ-ಸದಲಗಾ ಕ್ಷೇತ್ರದ 11 ಕಡೆ ಆರಂಭಿಸಲಾದ ಕಾಳಜಿ ಕೇಂದ್ರಗಳಿಗೆ ಔಷದೋಪಚಾರದ ಜೊತೆಗೆ ಬೆಡಶಿಟ್, ಬಕೇಟ್, ತಟ್ಟೆ ,ಲೋಟ, ಸಾಬುನು, ಮಾಸ್ಕ್ ,ಸ್ಯಾನಿಟೈಜರ್ ಸೇರಿದಂತೆ ನಿತ್ಯ ಜೀವನಕ್ಕಾಗಿ ಅವಶ್ಯಕವಾಗಿರುವ ವಸ್ತುಗಳನ್ನು ಶಾಸಕ ಗಣೇಶ್ ಹುಕ್ಕೇರಿ ಹಂಚಿಕೆ ಮಾಡಿದರು.
ಇನ್ನು ಯಾರು ಸಹ ಪ್ರವಾಹದ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ, ನಾನು ಈ ಭಾಗದ ನಿಮ್ಮ ಶಾಸಕನ್ನಾಗಿ ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿದ ಶಾಸಕ ಗಣೇಶ್ ಹುಕ್ಕೇರಿ ಸಂತ್ರಸ್ತರಿಗೆ ಧೈರ್ಯ ತುಂಬವ ಕೆಲಸ ಮಾಡಿದರು.ಮತ್ತು ಕೊವೀಡ್ ಬಗ್ಗೆ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮನವಿ ಮಾಡಿದರು.