ಕೂಗು ನಿಮ್ಮದು ಧ್ವನಿ ನಮ್ಮದು

ಸತ್ತಿಗೇರಿ ಗ್ರಾಮದಲ್ಲಿ ರಥ ಬೀದಿ ಕಾಮಗಾರಿಗೆ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಚಾಲನೆ

ಬೆಳಗಾವಿ : ಜಿಲ್ಲೆಯ ಯರಗಟ್ಟಿ ತಾಲೂಕಿನ ಸತ್ತಿಗೇರಿ ಗ್ರಾಮದಲ್ಲಿ 2020-21 ನೇ ಸಾಲಿನ ಜಿಲ್ಲಾ ಖನಿಜ ನಿಧಿ (DMF) ಯೋಜನೆಯಲ್ಲಿ ಮೂಂಜುರಾದ 9 ಕಾಂಕ್ರೇಟ್ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ ಚಾಲನೆ ನೀಡಿದರು.

ಅಂದಾಜು ವೆಚ್ಚ 45 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಮತ್ತು ಸತ್ತಿಗೇರಿ ಗ್ರಾಮ ಪಂಚಾಯತ ಆವರಣದಲ್ಲಿ ಗಾರ್ಡನ್ ನಿರ್ಮಾಣ ಮಾಡಲು ಚಾಲನೆ ನೀಡಿದರು. ಈ ವೇಳೆ ಜಿಲ್ಲಾ ಪಂಚಾಯತ ಸದಸ್ಯರಾದ ಅಜೀತ ದೇಸಾಯಿ, ಸತ್ತಿಗೆರಿ ಗ್ರಾಮ ಪಂಚಾಯತ ಅಧ್ಯಕ್ಷ ಗೌಡಪ್ಪ, ಮಾಜಿ ತಾಲೂಕ ಪಂಚಾಯತ ಅಧ್ಯಕ್ಷರಾದ ಪರ್ತಗೌಡ ಪಾಟಿಲ್, ಬಿಜೆಪಿ ತಾಲೂಕು ಅಧ್ಯಕ್ಷ ಈರಣ್ಣಾ ಚಂದರಗಿ, ಬಿಜೆಪಿ ಮುಖಂಡ ಮಹಾಂತೇಶ ಗೋಡಿ, ಪ್ರಕಾಶ, ನಾಗಪ್ಪ, ಹೊಸಮನಿ, ಎ. ಎಮ್ ಶಂಕರಲಿಂಗಪ್ಪನವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!