ಉಡುಪಿ: ರಾಜ್ಯಾದ್ಯಂತ ಹಿಜಬ್ ಕೇಸರಿ ವಿವಾದ ವಿಚಾರ ಉಡುಪಿಯಲ್ಲಿ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯ ಸರ್ಕಾರದ ವಸ್ತ್ರ ಸಂಹಿತೆಯನ್ನು ಎಲ್ಲರೂ ಗೌರವಿಸಿ. ಈ ಗೊಂದಲದ ಹಿಂದೆ ದೊಡ್ಡ ಪ್ರಮಾಣದ ಹಿಡನ್ ಅಜೆಂಡಾ ಇದೆ. ಹಿಡನ್ ಅಜೆಂಡಾವನ್ನು ರಾಜ್ಯ ಸರಕಾರ ಬಗ್ಗು ಬಡಿಯಲಿದೆ. ಈ ನೆಲದ ಕಾನೂನು ಗೌರವಿಸದವರು, ಇಲ್ಲಿ ಇರಲು ಅನರ್ಹರು ಎಂದು ಸಚಿವ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ರು. ಇದೇ ವೇಳೆ ಮಾತನಾಡುತ್ತ, ಸುತ್ತೋಲೆ- ಕಾನೂನಿಗಿಂತ, ಸಮಾನತೆ ಮುಖ್ಯ. ಮತೀಯ ಸಂಗತಿಗಳ ವಿಜೃಂಭಣೆ ಒಳ್ಳೇದಲ್ಲ. ವಿವಾದ ಕಾಂಗ್ರೆಸ್ ಟೂಲ್ ಕಿಟ್ ನ ಒಂದು ಭಾಗ. ಹೀಗಾಗಿ ವಿದ್ಯಾರ್ಥಿನಿಯರ ಪೋಷಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಮುಸ್ಲಿಂ ಸಮುದಾಯದ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬನ್ನಿ. ನಾನು ಮುಸಲ್ಮಾನ ಮಹಿಳೆಯರಿಗೆ, ಯುವತಿಯರಿಗೆ ಕರೆ ಕೊಡುತ್ತೇನೆ. ಇಸ್ಲಾಂ ನಿಮ್ಮನ್ನು ಬಗ್ಗು ಬಡಿಯುವ, ಮುಸುಕಿನಲ್ಲಿ ಇರಿಸುವ ಪ್ರಯತ್ನ ಮಾಡುತ್ತಿದೆ. ತ್ರಿಪಲ್ ತಲಾಖ್ ರದ್ಧು ನಿಮಗೆ ಮಾಡಿ ಭದ್ರತೆ ಕೊಟ್ಟಿದ್ದೇವೆ. ಜಗತ್ತಿನ ಯಾವುದೇ ದೇಶದಲ್ಲಿ ಇರದ ಕನಿಷ್ಟ ಪದ್ಧತಿ ಭಾರತದಲ್ಲಿ ಮುಂದುವರಿದಿದೆ. ನಾಳೆ ಉರ್ದುವಲ್ಲಿ ಪಾಠ ಮಾಡಿ ಎಂಬ ಒತ್ತಾಯ ಬರಬಹುದು. ವ್ಯವಸ್ಥೆ ಅಡಿಯಲ್ಲಿ ಎಲ್ಲವೂ ಸರಿಯಾಗಿ ನಡೆಯಬೇಕು. ವ್ಯಕ್ತಿ ಸ್ವಾತಂತ್ರ್ಯಕ್ಕೆ ಇಲ್ಲಿ ಅವಕಾಶ ಇಲ್ಲ. ಸಮವಸ್ತ್ರದ ಕಾನೂನು ಕೇಸರಿ ತೊಡುವವರಿಗೂ ಅನ್ವಯವಾಗಲಿದೆ ಎಂದು ಉಡುಪಿಯಲ್ಲಿ ಸಚಿವ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.