ಕೂಗು ನಿಮ್ಮದು ಧ್ವನಿ ನಮ್ಮದು

ಕೆಎಂಎಫ್‌ ವಿಲೀನಕ್ಕೆ ಹುನ್ನಾರ, ಅಮುಲ್ ವಿರುದ್ಧ ಕನ್ನಡಿಗರ ಆಕ್ರೋಶ

ಬೆಂಗಳೂರು: ಕರ್ನಾಟಕ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿರುವ ಗುಜರಾತಿನ ಅಮುಲ್‌ ನಡೆ ವಿರುದ್ಧ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ”ಸುಮಾರು ಅರ್ಧ ಶತಮಾನಗಳಷ್ಟು ಕಾಲ ರಾಜ್ಯದ ಮನ ಗೆದ್ದಿರುವ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮತ (ಕೆಎಂಎಫ್‌)ವನ್ನು ಗುಜರಾತ್‌ನ ಅಮುಲ್‌ನೊಂದಿಗೆ ವಿಲೀನಗೊಳಿಸುವ ಹುನ್ನಾರದ ಮೊದಲ ಹೆಜ್ಜೆ ಇದು,” ಎಂದೇ ಬಹುತೇಕರ ಅನುಮಾನ.

ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಹಾಲು ಮತ್ತು ಮೊಸರು ಮಾರಾಟ ಆರಂಭಿಸಲು ಅಮುಲ್‌ ಸಂಸ್ಥೆ ಮುಂದಾಗಿರುವುದು ರಾಜ್ಯದ ಜನರನ್ನು ಕೆರಳಿಸಿದೆ. ಐಸ್‌ಕ್ರೀಮ್‌ ಸೇರಿದಂತೆ ಹಲವು ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಅಮುಲ್‌ಗೆ ಇದು ಬೇಕಿರಲಿಲ್ಲ ಎಂದೇ ಬಹುತೇಕರು ಅಭಿಪ್ರಾಯ ಪಡುತ್ತಿದ್ದಾರೆ.

error: Content is protected !!