ಕೂಗು ನಿಮ್ಮದು ಧ್ವನಿ ನಮ್ಮದು

‘ನನ್ನ ನಿನ್ನೆ, ನಾಳೆಗಳು ನೀನೇ’; ಪತಿಯ ನೆನೆದು ಮೇಘನಾ ರಾಜ್ ಭಾವುಕ

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಪ್ರಿತಿಸಿ ಮದುವೆ ಆದವರು. ಆದರೆ ವಿಧಿಯ ಕೈವಾಡ. ಚಿರು ಸರ್ಜಾ ಮೃತಪಟ್ಟರು. ಅಲ್ಲಿಂದ ಮೇಘನಾ ರಾಜ್ ಕಣ್ಣೀರಲ್ಲಿ ಕೈ ತೊಳೆಯುವಂತೆ ಆಯಿತು. ಇಂದಿಗೆ ಚಿರಂಜೀವಿ ಸರ್ಜಾ ಮೃತಪಟ್ಟು ಮೂರು ವರ್ಷಗಳು ಕಳೆದಿವೆ. ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಫಾರ್ಮ್ಹೌಸ್ನಲ್ಲಿರುವ ಚಿರು ಸಮಾಧಿಗೆ ಇಡೀ ಕುಟುಂಬ ಭೇಟಿ ನೀಡಿ ಪುಷ್ಪಾರ್ಚನೆ ಮಾಡಿದೆ. ಇದಕ್ಕೂ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

2020ರ ಜೂನ್7 ರಂದು ಚಿರಂಜೀವಿಗೆ ಹೃದಯಾಘಾತವಾಯಿತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಾಲಯಿತು. ಆದರೆ, ಅವರು ಬದುಕುಳಿಯಲೇ ಇಲ್ಲ. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಅಕ್ಷರಶಃ ಎಲ್ಲರೂ ಶಾಕ್ಗೆ ಒಳಗಾದರು. ಅನೇಕ ತಿಂಗಳ ಕಾಲ ಮೇಘನಾ ರಾಜ್ ಅವರು ಕಣ್ಣೀರಲ್ಲಿ ಕೈ ತೊಳೆದರು. ಚಿರು ಮೃತಪಡುವಾಗ ಮೇಘನಾ ಪ್ರೆಗ್ನೆಂಟ್ ಆಗಿದ್ದರು. ಚಿರು ಮೃತಪಟ್ಟ ಕೆಲ ತಿಂಗಳ ನಂತರ ಮೇಘನಾಗೆ ಗಂಡುಮಗು ಜನಿಸಿತು. ಎಷ್ಟೇ ವರ್ಷ ಕಳೆದರೂ ಪತಿಯ ಕಳೆದುಕೊಂಡ ನೋವು ಅವರನ್ನು ಬಿಟ್ಟು ಹೋಗುತ್ತಿಲ್ಲ.

ಚಿರಂಜೀವಿ ಜನ್ಮದಿನ ಇರಲಿ ಪುಣ್ಯತಿಥಿ ಇರಲಿ ಮೇಘನಾ ರಾಜ್ ಅವರು ಪತಿಯ ಜೊತೆಗಿನ ಫೋಟೋ ಹಂಚಿಕೊಳ್ಳುತ್ತಾರೆ. ಅದೇ ರೀತಿ ಮೇಘನಾ ಅವರು ಇಂದು ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಚಿರು ನಿಂತಿದ್ದಾರೆ. ಅವರ ಹಿಂದೆ ಮೇಘನಾ ನಿಂತಿದ್ದಾರೆ. ಇಬ್ಬರ ಮುಖದಲ್ಲೂ ನಗು ಇದೆ. ಈ ಫೋಟೋಗೆ ಮೇಘನಾ, ‘ನನ್ನ ನಿನ್ನೆ, ಇಂದು ಹಾಗೂ ನಾಳೆಗಳು ನೀನೆ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಶೇರ್ ಮಾಡಿಕೊಂಡ ಒಂದು ಗಂಟೆಯಲ್ಲಿ ಸಾವಿರಾರು ಲೈಕ್ಸ್ ಸಿಕ್ಕಿದೆ. ಅಭಿಮಾನಿಗಳು ಕಮೆಂಟ್ ಬಾಕ್ಸ್ನಲ್ಲಿ ‘ಮಿಸ್ ಯೂ ಚಿರು ಸರ್ಜಾ’ ಎಂದು ಬರೆದುಕೊಂಡಿದ್ದಾರೆ.

ಇಂದು ಮಧ್ಯಾಹ್ನ ಮೇಘನಾ ರಾಜ್, ಧ್ರುವ ಸರ್ಜಾ, ರಾಯನ್ ರಾಜ್ ಸರ್ಜಾ ಚಿರು ಸಮಾಧಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಚಿರು ಸಮಾಧಿಗೆ ಪೂಜೆ ಮಾಡಲಾಗಿದೆ. ಚಿರು ಅಭಿಮಾನಿಗಳು ಕೂಡ ಇಲ್ಲಿ ನೆರೆದಿದ್ದರು. ಇಡೀ ಕುಟುಂಬ ಚಿರುನ ನೆನೆದು ಭಾವುಕ ಆಯಿತು.

error: Content is protected !!