ಲಂಡನ್: ಎರಡನೇ ದಿನ ಭೋಜನ ವಿರಾಮದ ಬಳಿಕ ಬ್ಯಾಟಿಂಗ್‌ಗೆ ಬಂದ ಟೀಮ್ ಇಂಡಿಯಾ, ಆರಂಭಿಕ ಆಘಾತ ಎದುರಿಸಿತು. ಓಪನರ್‌ಗಳಾದ ರೋಹಿತ್ ಶರ್ಮಾ (15) ಮತ್ತು ಶುಭಮನ್ ಗಿಲ್ (13) ಉತ್ತಮ ಆರಂಭ ಕಂಡರೂ ಆಸೀಸ್ ವೇಗಿಗಳಿಗೆ ವಿಕೆಟ್ ಒಪ್ಪಿಸಿಬಿಟ್ಟರು. ಭಾರತ ತಂಡ 30ಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಚಹಾ ವಿರಾಮಕ್ಕೆ ಭಾರತ ತಂಡ 2 ವಿಕೆಟ್ ನಷ್ಟದಲ್ಲಿ 37 ರನ್ವ ಕಲೆಹಾಕಿತ್ತು.
IND vs AUS Live ಸ್ಕೋರ್ ಕಾರ್ಡ್
469ಕ್ಕೆ ಆಸ್ಟ್ರೇಲಿಯಾ ಆಲ್‌ಔಟ್
ಮೊಹಮ್ಮದ್ ಸಿರಾಜ್ (108ಕ್ಕೆ 4) ಅವರ ಕೆಚ್ಚೆದೆಯ ಬೌಲಿಂಗ್ ಪ್ರದರ್ಶನದ ಫಲವಾಗಿ ಪುಟಿದೆದ್ದ ಭಾರತ ತಂಡ ಬೃಹತ್ ಮೊತ್ತ ಎದುರು ನೋಡುತ್ತಿದ್ದ ಆಸ್ಟ್ರೇಲಿಯಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 469 ರನ್‌ಗಳಿಗೆ ನಿಯಂತ್ರಿಸಲು ಯಶಸ್ವಿಯಾಯಿತು. ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಶತಕದ ಹೊರತಾಗಿ ಇನಿಂಗ್ಸ್ ಅಂತ್ಯದಲ್ಲಿ ಅಲೆಕ್ಸ್ ಕೇರಿ, ಬಿರುಸಿನ 48 ರನ್‌ಗಳ ಕೊಡುಗೆ ಕೊಟ್ಟರು. ಪರಿಣಾಮ ಆಸೀಸ್ 450ರ ಗಡಿ ದಾಟಲು ಸಾಧ್ಯವಾಯಿತು. ಸಿರಾಜ್ ಹೊರತಾಗಿ ಭಾರತದ ಪರ ಶಾರ್ದುಲ್ ಠಾಕೂರ್ ಮತ್ತು ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರು. ಜಡೇಜಾಗೆ ಏಕೈಕ ಯಶಸ್ಸು ಸಿಕ್ಕರೆ, ಬದಲಿ ಫೀಲ್ಡರ್ ಅಕ್ಷರ್ ಪಟೇಲ್ ಮಿಂಚಿನ ರನ್‌ಔಟ್ ಮೂಲಕ ಗಮನ ಸೆಳೆದರು.
ಭೋಜನ ವಿರಾಮಕ್ಕೂ ಮುನ್ನ 4 ವಿಕೆಟ್ ಪಡೆದ ಭಾರತ
ಎರಡನೇ ದಿನ ಆರಂಭದಲ್ಲೇ ಮೊದಲ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಸ್ಟೀವ್ ಸ್ಮಿತ್ ಕೂಡ ಶತಕ ಬಾರಿಸಿದರು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 600ಕ್ಕೂ ಹೆಚ್ಚು ರನ್ ಎದುರು ನೋಡುತ್ತಿದೆ. ಆದರೆ, 2ನೇ ದಿನ ಭಾರತ ಭೋಜನ ವಿರಾಮಕ್ಕೂ ಮುನ್ನ 4 ವಿಕೆಟ್ ಪಡೆದು ಕಮ್‌ಬ್ಯಾಕ್ ಎದುರು ನೋಡುತ್ತಿದೆ. ದಿನದ ಆರಂಭದಲ್ಲಿ ಸ್ಟೀವ್ ಸ್ಮಿತ್ (121) ಶತಕದೊಂದಿಗೆ ಬೃಹತ್ ಸ್ಕೋರ್ ಎದುರು ನೋಡುತ್ತಿದ್ದ ಆಸೀಸ್ ಮತ್ತೆ ಆಘಾತಕ್ಕೊಳಗಾಯಿತು. ಸೆಟ್ ಬ್ಯಾಟರ್‌ಗಳನ್ನು ಔಟ್ ಮಾಡುವ ಮೂಲಕ ಭಾರತ ಕಮ್‌ಬ್ಯಾಕ್ ಮಾಡಿತ್ತು.
ಬ್ಯಾಕ್ ಟು ಬ್ಯಾಕ್ ವಿಕೆಟ್
ಎರಡನೇ ದಿನ ಆರಂಭದಲ್ಲಿ ಆಕ್ರಮಣಕಾರಿ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ, ಸೆಟ್ ಬ್ಯಾಟರ್ ಟ್ರಾವಿಸ್ ಹೆಡ್ (163) ಮತ್ತು ಅಪಾಯಕಾರಿ ಬ್ಯಾಟರ್ ಕ್ಯಾಮೆರಾನ್ ಗ್ರೀನ್ (6) ಅವರನ್ನು ಪೆವಿಲಿಯನ್‌ಗೆ ಸೇರಿಸಿದರು. ಬಳಿಕ ಮ್ಯಾಜಿಕ್ ಬೌಲರ್ ಶಾರ್ದುಲ್ ಠಾಕೂರ್, ಅಪಾಯಕಾರಿ ಬ್ಯಾಟರ್ ಸ್ಟೀವ್ ಸ್ಮಿತ್ (121) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಭೋಜನ ವಿರಾಮಕ್ಕೂ ಮುನ್ನ 4 ವಿಕೆಟ್ ಪಡೆದ ಭಾರತ ತಂಡ ಸಾಧ್ಯವಾದಷ್ಟು ಬೇಗ ಎದುರಾಳಿಯನ್ನು ಆಲ್‌ಔಟ್ ಮಾಡಿ ಕಮ್‌ಬ್ಯಾಕ್ ಎದುರು ನೋಡುತ್ತಿದೆ.
ಸ್ಟೀವ್ ಸ್ಮಿತ್ ಶತಕ
ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಮೊದಲ ದಿನ 227 ಎಸೆತಗಳಲ್ಲಿ 95 ರನ್ ಬಾರಿಸಿ ಔಟಾಗದೇ ಉಳಿದಿದ್ದರು. ಎರಡನೇ ದಿನ ಆಟ ಶುರುವಾದ ಕೆಲವೇ ನಿಮಿಷಗಳಲ್ಲಿ ಶತಕ ಪೂರೈಸಿ ಸಂಬ್ರಮಿಸಿದರು. ಮೊಹಮ್ಮದ್ ಸಿರಾಜ್ ಎದುರು ಲೆಗ್ ಸೈಡ್ ಕಡೆಗೆ ಸತತ ಫೋರ್ ಬಾರಿಸಿ ಶತಕ ಸಂಭ್ರಮ ಆಚರಿಸಿದರು. ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಮಿತ್ ಬಾರಿಸಿದ 9ನೇ ಶತಕವಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ (8) ಮತ್ತು ರಿಕಿ ಪಾಂಟಿಂಗ್ (8) ಅವರ ಶತಕಗಳ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಭಾರತ-ಆಸ್ಟ್ರೇಲಿಯಾ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಸಚಿನ್ ತೆಂಡೂಲ್ಕರ್ (11) ಹೆಸರಲ್ಲಿದೆ.
ಮೊದಲ ದಿನ 327/3 ರನ್ ಬಾರಿಸಿದ್ದ ಆಸ್ಟ್ರೇಲಿಯಾ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 76ಕ್ಕೆ 3 ವಿಕೆಟ್ ಪಡೆದುಕೊಂಡಿತ್ತು. ಆದರೆ, 4ನೇ ವಿಕೆಟ್‌ಗೆ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ದಾಖಲೆಯ 250ಕ್ಕೂ ಹೆಚ್ಚಿನ ಜೊತೆಯಾಟ ಕಟ್ಟಿ ಕಾಂಗರೂ ಪಡೆಯನ್ನು ಸಂಕಷ್ಟದಿಂದ ಪಾರು ಮಾಡಿದರು. ಮೊದಲ ದಿನವೇ ಟ್ರಾವಿಸ್ ಹೆಡ್ ಶತಕ ಬಾರಿಸಿ ಆಸೀಸ್‌ಗೆ ಮೇಲುಗೈ ತಂದಿದ್ದರು.