ಕೂಗು ನಿಮ್ಮದು ಧ್ವನಿ ನಮ್ಮದು

ವಿಷ ಸೇವಿಸಿದ ವಿವಾಹಿತ ಪ್ರೇಮಿಗಳು: ಪ್ರೀಯಕರನ ತೊಡೆಯ ಮೇಲೆಯೇ ಪ್ರಾಣ ಬಿಟ್ಟ ಮಹಿಳೆ

ವಿಜಯಪುರ: ಮಹಿಳೆಯೊರ್ವಳು ವಿಷ ಸೇವಿಸಿ ಪ್ರೀಯಕರನ ತೊಡೆ ಮೇಲೆ ನರಳಿ ನರಳಿ ಪ್ರಾಣಬಿಟ್ಟ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಗಂಗೂರು ಗ್ರಾಮದ 36 ವರ್ಷದ ರೇಣುಕಾ ಝಳಕಿ ಹಾಗೂ ಹಡಲಗೇರಿ ಗ್ರಾಮದ 40 ವರ್ಷದ ಕುಡುಕ ಬಸವರಾಜ್ ಕಿಲಾರಹಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಮೃತ ರೇಣುಕಾಗೆ 3 ಮಕ್ಕಳು, ಬಸವರಾಜ್ ಗೆ 6 ಮಕ್ಕಳು, ಇಬ್ಬರಿಗು ಮದುವೆಯಾಗಿದ್ದರು ಅನೈತಿಕ‌ ಸಂಬಂಧ ಹೊಂದಿದ್ದರು. ನಿನ್ನೆ ಇಬ್ಬರು ಬಿದರಕುಂದಿ ಗ್ರಾಮದ ಹೊರವಲಯದಲ್ಲಿ ಸೇರಿ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದಾರೆ.

ಈ ವೇಳೆ ಬಸವರಾಜ್ ಕುಡಿದ ಅಮಲಿನಲ್ಲಿದ್ದು ಕಡಿಮೆ ವಿಷ ಕುಡಿದಿದ್ದಾನೆ. ಆದರೆ ಆ ವೇಳೆ ರೇಣುಕಾ ಹೆಚ್ಚು ವಿಷ ಸೇವಿಸಿದ್ದರಿಂದ ಸ್ಥಳದಲ್ಲೆ ಅಸ್ವಸ್ಥಗೊಂಡು ಒದ್ದಾಡಿದ್ದಾಳೆ. ಈ ವೇಳೆ ಆಕೆಯ ಪ್ರೀಯಕರ ಆಕೆಯನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಂತೈಸುತ್ತಿದ್ದ. ಬಸವರಾಜ್ ತೊಡೆ ಮೇಲೆಯೇ ರೇಣುಕಾ ಬಾಯಿಂದ ರಕ್ತಕಾರಿ ಒದ್ದಾಡಿದ್ದಾಳೆ. ಆದರೂ ಆಕೆಯನ್ನು ಆಸ್ಪತ್ರೆಗೆ ದಾಖಲಿಸದೆ ಪ್ರೀಯಕರ ಬಸವರಾಜ್ ತೊಡೆಯ ಮೇಲೆಯೇ ಮಲಗಿಸಿಕೊಂಡಿದ್ದ. ತೀವ್ರ ಅಸ್ವಸ್ಥಗೊಂಡಿದ್ದ ರೇಣುಕಾ ಬಸವರಾಜ್ ತೊಡೆಯ ಮೇಲೆಯೇ ಸಾವನ್ನಪ್ಪಿದ್ದಾಳೆ. ಬಳಿಕ ಬಸವರಾಜ್ ನನ್ನ ಸ್ಥಳಿಯರು ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಅತ್ತ ಮೃತ ರೇಣುಕಾ ಪತಿ ಅಶೋಕ ದುಡಿಯಲು ಕೇರಳಕ್ಕೆ ಗುಳೆ ಹೋಗಿದ್ದಾನೆ. ರೇಣುಕಾ ಪತಿ ಅಶೋಕನ ಸ್ನೇಹಿತನಾಗಿರುವ ಪ್ರೀಯಕರ ಬಸವರಾಜ್, ಗೆಳೆಯನಿಲ್ಲದ ವೇಳೆ ಆತನ ಸಂಸಾರದಲ್ಲಿ ಕಿಚ್ಚು ಹೊತ್ತಿಸಿದ್ದು, ಈ ಪ್ರೀತಿಯ ಕಿಚ್ಚಿಗೆ ರೇಣುಕಾ ಸಾವನ್ನಪ್ಪಿದ್ರೆ ಬಸವರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

error: Content is protected !!