ಮದುವೆ ಅಂದರೆ ಸಂತಸ ಸಂಭ್ರಮ. ಡಿಜೆ ಪಾರ್ಟಿ, ಹಾಡು ಕುಣಿತ ಇದ್ದೆ ಇರುತ್ತೆ. ಆ ಮದುವೆಯಲ್ಲಿ ಸೋದರ ಅತ್ತೆ ಅಥವಾ ಮಾವನ ಪಾತ್ರವು ಪ್ರಮುಖವಾಗಿರುತ್ತದೆ. ಇತ್ತಿಚೆಗೆ ಸಿರಿವಂತರು ವಧು ವರರ ಮೇಲೆ ಹಣ ತೂರುವುದನ್ನು ನೋಡಿರುತ್ತಿರಾ.. ಆದರೆ ಇಲ್ಲೊಬ್ಬ ವಿಭಿನ್ನ ಸೋದರ ಮಾವನ ಪ್ರಸಂಗ ಬಾರಿ ವೈರಲ್ ಆಗಿದೆ .
ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕರೀಂ ಯಾದವ್ ಎಂಬುವನು ತನ್ನ ಸೋದರಳಿಯನ ಮದುವೆಯಲ್ಲಿ ತಮ್ಮ ನಿವಾಸದ ಮೇಲಿನಿಂದ ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಬಂಡಲ್ಗಳನ್ನು ಸುರಿಸುತ್ತಿರುವುದನ್ನು ವೀಡಿಯೊದ ಮೂಲಕ ನೋಡಬಹುದು
ಟ್ವಿಟ್ಟರ್ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವೀಡಿಯೊದಲ್ಲಿ, ಮಾಜಿ ಗ್ರಾಮ ಪಂಚಾಯಿತಿ ಕರೀಂ ಯಾದವ್ ಎಂಬುವು ಕೇಕ್ರಿ ತಹಸಿಲ್ನಲ್ಲಿ ನಡೆದ ವಿವಾಹ ಕಾರ್ಯಕ್ರಮದ ಸಂದರ್ಭದಲ್ಲಿ ತಮ್ಮ ಮನೆಯ ಮೇಲಿನಿಂದ ಹಲವಾರು ಲಕ್ಷ ಮೌಲ್ಯದ ಕರೆನ್ಸಿ ನೋಟುಗಳನ್ನು ಸುರಿಯುವುದನ್ನು ಕಾಣಬಹುದು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕರೀಂ ಯಾದವ್ ತನ್ನ ಸೋದರಳಿಯ ರಜಾಕ್ ಅವರ ಮದುವೆಯ ಮೆರವಣಿಗೆ ಬೀದಿಗಳಲ್ಲಿ ಹಾದುಹೋಗುವಾಗ ಮನೆಯ ಮೇಲಿಂದ 500 ರೂಪಾಯಿ ನೋಟುಗಳ ಸುರಿಮಳೆ ಸುರಿಸಿದ್ದಾನೆ.ವಿಡಿಯೋದಲ್ಲಿ ಕಂಡು ಬಂದಂತೆ ಹಣವನ್ನು ಮೇಲಿನಿಂದ ಹಾಕುತ್ತಿದ್ದಂತೆ ಮಾಜಿ ಸರಪಂಚರ ಮನೆಯ ಹೊರಗೆ ನಗದು ಹಣವನ್ನು ಸಂಗ್ರಹಿಸಲು ಜನಸಾಗರವೇ ತುಂಬಿತ್ತು. ಜನಪ್ರಿಯ ಬಾಲಿವುಡ್ ಚಿತ್ರ ‘ಜೋಧಾ ಅಕ್ಬರ್’ ನ ‘ಅಜೀಮ್-ಓ-ಶಾನ್ ಶೆಹೆನ್ಶಾ’ ಹಾಡಿನ ಮೂಲಕ ಅದ್ದೂರಿ ಮೆರವಣಿಗೆ ನಡೆಸಲಾಗಿದೆ.