ಕೂಗು ನಿಮ್ಮದು ಧ್ವನಿ ನಮ್ಮದು

ಇಷ್ಟವಿಲ್ಲದಿದ್ದರೂ 2 ಮದುವೆ ಆಗಲೇಬೇಕು; ಈ ದೇಶದಲ್ಲಿ ಹೀಗೊಂದು ಕಾನೂನು

ಎರಿಟ್ರಿಯಾ: ಇಷ್ಟ ಇಲ್ಲದಿರಲಿ, ಸುಖ ಇಲ್ಲದಿರಲಿ, ಆದ್ರೆ ಈ ದೇಶದಲ್ಲಿ ಮಾತ್ರ ಪುರುಷರು 2 ಮದುವೆ ಆಗಲೇಬೇಕು. ಮಹಿಳೆಯರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಬೇಕು. ಏನು ವಿಚಿತ್ರ ಅಲ್ವಾ? ಕೆಲವರು ಒಂದಲ್ಲ 2 ಮದುವೆಯಾಗಲೂ ಸಿದ್ಧರಿರುತ್ತಾರೆ. ಆದ್ರೆ ಕೆಲವರು ಇದಕ್ಕೆ ವಿರುದ್ಧ ಅಂದರೆ ಒಂದೇ ಮದುವೆಯಾಗುತ್ತಾರೆ. ಆದ್ರೆ ಈ ದೇಶದ ಸಂಪ್ರದಾಯವನ್ನು ನೀವು ಕೇಳಿದರೆ ಆಶ್ಚರ್ಯಗೊಳ್ಳುವುದು ಖಂಡಿತ. ಪ್ರತಿಯೊಂದು ದೇಶದಲ್ಲಿ ಮದುವೆಗೆ ಸಂಬಂಧಿಸಿದ ವಿಭಿನ್ನ ಕಾನೂನುಗಳಿವೆ. ಆದ್ರೆ ಈ ದೇಶದಲ್ಲಿ ಮಾತ್ರ ಪುರುಷರು 2 ಮದುವೆಯಾಗುವುದು ಕಡ್ಡಾಯ. ಇದು ಕಾನೂನು ಕೂಡ ಹೌದು. ಇದಕ್ಕೆ ಒಪ್ಪದಿದ್ದರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇಂತಹ ವಿಚಿತ್ರ ಕಾನೂನು ಇರುವುದು ಆಫ್ರಿಕಾ ಖಂಡದ ಎರಿಟ್ರಿಯಾ ಎಂಬ ದೇಶದಲ್ಲಿ

ಎರಿಟ್ರಿಯಾದಲ್ಲಿ ಗಂಡಸರು 2 ಮದುವೆ ಮಾಡಿಕೊಳ್ಳುವುದು ಕಡ್ಡಾಯ. ನಿರಾಕರಿಸಿದರೆ ಅವರೆಲ್ಲ ಜೈಲಿಗೆ ಹೋಗಬೇಕಾಗುತ್ತದೆ. ಜೀವಾವಧಿ ಶಿಕ್ಷೆಯೂ ಅನುಭವಿಸಬೇಕಾಗುತ್ತದೆ. ಯಾಕೆ? ಇದೇನು ನಿಯಮ ಅಂತ ಯೋಚಿಸುತ್ತಿದ್ದೀರಾ? ಇವೆಲ್ಲದಕ್ಕೂ ಉತ್ತರ, ಆ ದೇಶದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿರುವುದು.

error: Content is protected !!