ಹೈದರಾಬಾದ್: ಉಕ್ರೇನ್ ವಧುವಿನ ಜೊತೆಗೆ ಹೈದರಾಬಾದ್ ವರನೊಬ್ಬ ಮದುವೆಯಾಗಿದ್ದಾನೆ. ಆರಕ್ಷತೆ ಸಮಾರಂಭದ ವೇಳೆ ಅರ್ಚಕರು ರಷ್ಯಾ ಉಕ್ರೇನ್ ಯುದ್ಧ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಈ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಪ್ರತೀಕ್ ಹಾಗೂ ಲ್ಯುಬೊವ್ ಉಕ್ರೇನ್‍ನಲ್ಲಿ ಮದುವೆಯಾಗಿದ್ದರು. ಆರಕ್ಷತೆಗಾಗಿ ಹೈದರಾಬಾದ್‍ಗೆ ಬಂದ ಮರುದಿನವೇ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿತ್ತು.
ಹಾಗಾಗಿ ವಧುವಿನ ಆತ್ಮಸ್ಥೈರ್ಯ ಕುಂದದಂತೆ ನೋಡಿಕೊಂಡ ಪ್ರತೀಕ್ ಪೋಷಕರು, ಆಕೆಗೆ ಮಾನಸಿಕವಾಗಿ ಬೆಂಬಲ ನೀಡಿದ್ರು. ಇತ್ತೀಚೆಗೆ ಹೈದರಾಬಾದ್‍ನಲ್ಲಿ ಉಕ್ರೇನಿಯನ್ ವಧು ಲ್ಯುಬೊವ್ ಹಾಗೂ ಹೈದರಬಾದ್‍ನ ವರ ಪ್ರತೀಕ್ಷ್ ಮದುವೆ ಆರತಕ್ಷತೆ ಸಮಾರಂಭದಲ್ಲಿ, ಅರ್ಚಕ ರಂಗರಾಜನ್ ಭಾಗವಹಿಸಿದ್ದರು. ದೇವರ ವಿಶೇಷ ವಸ್ತ್ರಗಳನ್ನ ಮತ್ತು ಸ್ಮರಣಿಕೆಗಳನ್ನು ವಧು ವರರಿಗೆ ನೀಡಿ ಅವರಿಗೆ ದೀರ್ಘಾಯುಷ್ಯ ಮತ್ತು ಸಂತಾನಫಲ ಸಿಗಲಿ ಎಂದು ನವವಿವಾಹಿತರನ್ನು ಆಶೀರ್ವದಿಸಿದ್ರು.
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಅಂತ್ಯವಾಗಿ, ಕೂಡಲೇ ಶಾಂತಿ ನೆಲೆಸುವಂತಾಗಲಿ ಎಂದು ಚಿಲುಕೂರಿನ ಬಾಲಾಜಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು ಎಂದು ಹೇಳಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಶೀಘ್ರ ಅಂತ್ಯಗೊಳ್ಳಲಿ ಎಂದು ಚಿಲುಕೂರು ವೆಂಕಟೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇವೆ. ಯುದ್ಧವು ಪ್ರಪಂಚದಾದ್ಯಂತ ರಕ್ತಪಾತ ಮತ್ತು ದುರಂತಕ್ಕೆ ಕಾರಣವಾಯಿತು. ಕೋವಿಡ್‍ನ ದುರತದಿಂದ ಚೇತರಿಕೊಳ್ಳುವುದಕ್ಕೂ ಮುಂಚೆಯೇ ರಷ್ಯಾ ಉಕ್ರೇನ್ ಮೇಲೆ ದಾಳಿ ಆತಂಕವನ್ನ ಸೃಷ್ಟಿಸಿದೆ ಆದಷ್ಟು ಬೇಗ ಈ ಯುದ್ದವು ಕೊನೆಯಾಗಲಿ ಎಂದು ಹೇಳಿದ್ರು.