ಕೂಗು ನಿಮ್ಮದು ಧ್ವನಿ ನಮ್ಮದು

ಡಾನ್ಸ್ ಮಾಡಿರುವ ವಧುವಿನ ಕೆನ್ನೆಗೆ ಹೊಡೆದ ವರ, ವಿವಾಹ ಮುರಿದು ಬಿತ್ತು

ಚೆನ್ನೈ: ಆರತಕ್ಷತೆಯ ವೇದಿಕೆಯಲ್ಲಿ ಡಾನ್ಸ್ ಮಾಡಿರುವ ವಧುವಿನ ಕೆನ್ನೆಗೆ ವರ ಕಪಾಳಮೋಕ್ಷ ಮಾಡಿದ್ದಾನೆ. ಈ ಕುರಿತಾಗಿ ಸಿಟ್ಟಿಗೆದ್ದ ವಧು ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡು ಹೋಗಿರುವ ಘಟನೆ ಸಂಭವಿಸಿದೆ.
ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಪ್ರದೇಶದಲ್ಲಿ ಇಂಜಿನಿಯರ್ ವರನೊಂದಿಗೆ ಸ್ನಾತಕೋತ್ತರ ಪದವೀಧರೆ ಮದುವೆ ಆಗುತ್ತಿದ್ರು. ಜನವರಿ 20ರಂದು ವಿವಾಹ ನಿಶ್ವಯವಾಗಿತ್ತು. ಮದುವೆಯ ಹಿಂದಿನ ದಿನ ಎಂದರೆ ಆರತಕ್ಷತೆಯಲ್ಲಿ 2 ಕುಟುಂಬದವರು ಸಂಭ್ರಮದಲ್ಲಿ ಮುಳುಗಿರುತ್ತಾರೆ. ಆದ್ರೆ ವಧು, ವರ ಮಧ್ಯೆ ನಡೆದಿರುವ ಜಗಳ ಮದುವೆಯನ್ನು ಮುರಿದು ಬಿಟ್ಟಿದೆ.

ವಧು ಸ್ನೇಹಿತರು, ಸಂಬಂಧಿಕರೊಂದಿಗೆ ವೇದಿಕೆಯ ಕೆಳಗೆ ಡಿಜೆ ಹಾಡಿಗೆ ಡ್ಯಾನ್ಸ್ ಮಾಡುತ್ತಿರುತ್ತಾಳೆ. ಮಧು ಮಗನು ಆಕೆಗೆ ನೃತ್ಯ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಾನೆ. ಕೂಡಲೆ ಆಕೆಯನ್ನು ವೇದಿಕೆಯ ಮೇಲೆ ಕರೆದು ಕಪಾಳಮೋಕ್ಷ ಮಾಡಿದ್ದಾನೆ. ಈ ವಿಚಾರವಾಗಿ ಬೇಸರವಾದ ವಧು ಮದುವೆ ಬೇಡಾ ಎಂದು ಕಲ್ಯಾಣ ಮಂಟಪದಿಂದ ಹೊರಗೆ ಹೋಗಿದ್ದಾಳೆ. ಅವಳ ನಿರ್ಧಾರಕ್ಕೆ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ. ತದನಂತರ ಅದೇ ಮುಹೂರ್ತದಲ್ಲಿ ಆಕೆಯ ಸಂಬಂಧಿ ಯುವಕನೊಬ್ಬನ ಜೊತೆ ಪೋಷಕರು ದೇವಸ್ಥಾನದಲ್ಲಿ ಮಗಳ ವಿವಾಹ ಮಾಡಿದರು.

error: Content is protected !!