ಕೂಗು ನಿಮ್ಮದು ಧ್ವನಿ ನಮ್ಮದು

ಮದುವೆಯಲ್ಲಿ ಕೇಕ್ ತಿಂದಿದ್ದಕ್ಕೆ ಅತಿಥಿಗೆ ೩೬೬ ರೂಪಾಯಿ ಪಾವತಿಸಿ ಅಂದ ನವದಂಪತಿ

ಲಂಡನ್: ಮದುವೆ ಸಮಾರಂಭದಲ್ಲಿ ಅತಿಥಿಯೊಬ್ರು ಕೇವಲ ೧ ಪೀಸ್ ಕೇಕ್ ತಿಂದಿದ್ದಕ್ಕೆ ನವದಂಪತಿಗಳು ಹಣ ಪಾವತಿಸುವಂತೆ ಕೇಳಿದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ನವದಂಪತಿಗಳು ತಮ್ಮ ವಿವಾಹದ CCTV ದೃಶ್ಯವನ್ನು ವೀಕ್ಷಿಸಿದ್ದು, ಈ ವೇಳೆ ಅತಿಥಿಯೊಬ್ರು ಮದುವೆಯಲ್ಲಿ ೨ ಕೇಕ್ ಪೀಸ್ ತಿಂದಿರುವುದನ್ನು ನೋಡಿದ್ದಾರೆ. ನಂತರ ಈ ವೀಡಿಯೋವನ್ನು ಅತಿಥಿಯ ವಾಟ್ಸಾಪ್‍ಗೆ ಕಳುಹಿಸಿದ್ದಾರೆ.

ಈ ವೀಡಿಯೋದಲ್ಲಿ ಅತಿಥಿ ಎರಡನೇ ಸಲ ಕೇಕ್ ಕತ್ತರಿಸಿ ತಿನ್ನುತ್ತಿರುವುದನ್ನು ನೋಡಿ. ಈ ವೀಡಿಯೋ ಕಳುಹಿಸಿದರ ಅರ್ಥವೇನು ಎಂದು ಕೇಳಿದ್ದಾರೆ. ಆಗ, ನಾವು CCTV ದೃಶ್ಯದಲ್ಲಿ ನೀವು 2 ಬಾರಿ ಕೇಕ್ ಪೀಸ್‍ನ್ನು ತಿನ್ನುತ್ತಿರುವುದನ್ನು ನೋಡಿದ್ದೇವೆ. ಮದುವೆಗೆ ಬಂದ ಪ್ರತಿ ಅತಿಥಿಗಳಿಗೆ 1 ಪೀಸ್ ಕೇಕ್‍ಗೆ ಹಣ ಪಾವತಿಸುವಂತೆ ಘೋಷಿಸಿದ್ದೇವೆ. ಆದ್ರೆ ನೀವು ೧ ಕೇಕ್ ಪೀಸ್‍ಗೆ ಮಾತ್ರ ಹಣ ಪಾವತಿಸಿದ್ದೀರಾ, ನೀವು ತಿಂದ ಮತ್ತೊಂದು ಕೇಕ್ಗೆ ಹಣ ಪಾವತಿಸಲಿಲ್ಲ.

ಹಾಗಾಗಿ ದಯವಿಟ್ಟು ೩೬೬ ರೂಪಾಯಿಯನ್ನು ಆದಷ್ಟು ಬೇಗ ಕಳುಹಿಸಿಕೊಡುತ್ತೀರಾ? ಎಂದು ಮೇಸೆಜ್ ಮಾಡಿದ್ದಾರೆ. ಸದ್ಯ ಈ ಮೇಸೆಜ್ ನೋಡಿ ಶಾಕ್ ಆಗಿರುವ ನೆಟ್ಟಿಗರು, ನವದಂಪತಿಗಳು ಹನಿಮೂನ್‍ಗೆ ಹೋಗುವ ಬದಲು CCTV ದೃಶ್ಯ ನೋಡಿ ಅತಿಥಿಗಳಿಗೆ ಹಣಪಾವತಿಸುವಂತೆ ಕೇಳುತ್ತಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ. ಇನ್ನೂ ಈ ವಿಚಾರ ಅತಿಥಿಗಳಿಗೆ ಮುಜುಗರವನ್ನುಂಟು ಮಾಡಿದೆ.

error: Content is protected !!