ಕೂಗು ನಿಮ್ಮದು ಧ್ವನಿ ನಮ್ಮದು

ಕೇವಲ ಒಂದು ತಿಂಗಳ ಅವಧಿಯಲ್ಲಿ ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ ಸಂಗ್ರಹವಾಗಿದ್ದು ರೂ. 3.53 ಕೋಟಿ!

ರಾಯಚೂರು: ನಗರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ವಿದೇಶಗಳಿಂದಲೂ ಭಕ್ತರು ಬರುತ್ತಾರೆ. ರಾಯರ ಮಠಕ್ಕೆ ಪ್ರತಿದಿನ ಎಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಹೋಗುತ್ತಾರೆಂದರೆ, ಇಲ್ಲಿರುವ ಕಾಣಿಕೆ ಹುಂಡಿ ಕೇವಲ ಒಂದು ತಿಂಗಳ ಅವಧಿಯಲ್ಲಿ ತುಂಬಿ ಬಿಡುತ್ತದೆ.

ಕಳೆದ 34 ದಿನಗಳಲ್ಲಿ ಸಂಗ್ರಹವಾಗಿರುವ ಭಕ್ತರ ಕಾಣಿಕೆಯನ್ನು ಮಠದ ಸ್ವಯಂಸೇವಕರು ಎಣಿಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ರೂ. 3.53 ಕೋಟಿ. ಇದಲ್ಲದೆ ಭಕ್ತರು 102 ಗ್ರಾಂ ಚಿನ್ನಾಭರಣ ಮತ್ತು 1.187 ಕೇಜಿ ಬೆಳ್ಳಿ ಆಭರಣಗಳನ್ನೂ ಹುಂಡಿಗೆ ಹಾಕಿದ್ದಾರೆ

error: Content is protected !!