ಬೆಂಗಳೂರು: ಮಲೇಷ್ಯಾದ ನಟಿಯೊಬ್ಬರನ್ನು ವಂಚಿಸಿ, ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಎಐಎಡಿಎಂಕೆ ಮಾಜಿ ಸಚಿವ ಎಂ ಮಣಿಕಂಠನ್ ಅವರನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿಂದು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮಾಜಿ ಸಚಿವ ಮಣಿಕಂಠನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿಹಾಕಿತ್ತು. ಅಡ್ಯಾರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಮಣಿಕಂಠನ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಐದು ವರ್ಷಗಳಿಂದ ನಾನು ಲಿವ್ ಇನ್ ಸಂಬಂಧದಲ್ಲಿದ್ದೆ, ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ನನ್ನ ಮೇಲೆ ಅತ್ಯಾಚಾರವೆಸಲಾಗಿದೆ ಎಂದು ಮಲೇಷ್ಯಾ ಮೂಲದ ಮಹಿಳೆ ದೂರಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಕಾಯಲಾಗುತ್ತಿದೆ.