ಕೂಗು ನಿಮ್ಮದು ಧ್ವನಿ ನಮ್ಮದು

ಲಾಲ್ಬಾಗ್ನಲ್ಲಿ ಮಾವು, ಹಲಸಿನ ಮೇಳ ಉದ್ಘಾಟಿಸಿದ ಶಾಸಕ ರಾಮಲಿಂಗಾರೆಡ್ಡಿ

ಬೆಂಗಳೂರು: ನಗರದ ಲಾಲ್ಬಾಗ್ನಲ್ಲಿ ಮಾವು ಹಲಸಿನ ಮೇಳವನ್ನ ಆಯೋಜಿಸಲಾಗಿದ್ದು, ಸಚಿವ ರಾಮಲಿಂಗಾರೆಡ್ಡಿ, ಹಾಗೂ ಶಾಸಕ ಉದಯ್ ಗರುಡಾಚಾರ್ ಉದ್ಘಾಟಿಸಿದರು. ಇಂದಿನಿಂದ ಜೂ.5ರವರೆಗೆ ಲಾಲ್ಬಾಗ್ನಲ್ಲಿ ಮಾವು, ಹಲಸಿನ ಮೇಳ ನಡೆಯಲಿದ್ದು, ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸಿದ್ದಾರೆ. ಇನ್ನು ಈ ಮೇಳದಲ್ಲಿ ತೋಟಗಾರಿಕೆ ಇಲಾಖೆ 10% ರಿಯಾಯಿತಿ ದರ ನಿಗದಿ ಮಾಡಿದೆ. ಒಂದು ಕಡೆ ಬಗೆ ಬಗೆಯ ಮಾವು. ಮತ್ತೊಂದು ಕಡೆ ಹಲಸಿನ ಹಣ್ಣು. ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ಮಾವು ಹಲಸಿನ ಮೇಳಕ್ಕೆ ತೋಟಾಗಾರಿಕೆ ಇಲಾಖೆ ಇಂದು ಚಾಲನೆ ನೀಡಿದೆ. ವಿವಿಧ ರೀತಿಯ ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣು ಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ. ಇಂದಿನಿಂದ 19 ದಿನಗಳ ಕಾಲ ಈ ಮೇಳ ನಡೆಯಲಿದೆ. ಅನೇಕ ಬಗೆಯ ಮಾವಿನ ಹಣ್ಣುಗಳು

ಇನ್ನು ಸಸ್ಯಕಾಶಿ ಲಾಲ್ಬಾಗ್ನಲ್ಲಿ ಮಾವು ಹಲಸಿನ ಮೇಳಕ್ಕೆ ಚಾಲನೆ ಸಿಕ್ಕಿದ್ದು, ‌ಇಂದಿನಿಂದ ಮೇಳ ಶುರುವಾಗಿದೆ. ಈ ಮೇಳ ಜೂನ್ 13ರ ವರೆಗೆ ನಡೆಯಲಿದೆ. ಮೇಳದಲ್ಲಿ ಬಾದಾಮಿ, ರಸ್ಪೂರಿ, ಮಲ್ಲಿಕಾ, ಮಲ್ಗೋವಾ, ಕಾಡುಮಾವು, ಕಾಲಪಾಡು, ದಶೇರಿ, ಕೇಸರ್, ನೀಲಂ ಸೇರಿದಂತೆ ಹಲವು ಮಾವು ತಳಿಗಳನ್ನು ಈಡಲಾಗಿದ್ದು, ಸಿಲಿಕಾನ್ ಸಿಟಿ ಜನರನ್ನ ಸೆಳೆಯುತ್ತಿದೆ.

ಇನ್ನು ಕಳೆದ ವರ್ಷ ಕೊರೋನಾ ಬಂದು ಹೋದ ಬಳಿಕ ಅಂದರೆ 3 ವರ್ಷಗಳ ನಂತರ ಆಯೋಜನೆ ಮಾಡಲಾಗಿತ್ತು. ಅಂದು ನಡೆದ ಮಾವು, ಹಲಸಿನ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆ ಮೇಳದಲ್ಲಿ 20ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣುನ್ನು ಈಡಲಾಗಿತ್ತು. ಬಾದಾಮಿ, ಮಲ್ಲಿಕಾ, ರಸಪೂರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಇಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣು ಮೇಳದಲ್ಲಿ ಸಿಕ್ಕಿತ್ತು. ರೈತರು ತಾವು ಬೆಳದ ಮಾವು ಮತ್ತು ಹಲಸಿನ ಹಣ್ಣಿಗೆ ತೋಟಾಗಾರಿಕೆ ಇಲಾಖೆ‌ ವೇದಿಕೆ ಸೃಷ್ಟಿ ಮಾಡಿತ್ತು. ಇದೀಗ ಮತ್ತೆ ಲಾಲ್‌ಬಾಗ್ ನಲ್ಲಿ ಮುಂದಿನ 19 ದಿನ ಮಾವು ಹಲಸಿನ ಪರಿಮಳವೇ ಪ್ರವಾಸಿಗರನ್ನು ಹಾಗೂ ಸಿಲಿಕಾನ್‌ ಸಿಟಿ ಜನರನ್ನ ಸೆಳೆಯಲಿದೆ.

ಇನ್ನು ಕಳೆದ ಬಾರಿ ಮಾಮ್ ಪಸಂದ್ 200, ಮಲ್ಲಿಕಾ 100, ಬಾದಾಮಿ 100, ಸಕ್ಕರೆ ಗುತ್ತಿ 150, ಸಿಂಧೂರ 50, ರಸ್ಪುರಿ 80, ದೆಸೇರಿ 100, ಕಲಾಪಡ 120, ಮಲ್ಗೋವಾ 120, ತೋತಾಪುರಿ 30, ಅಮರಪಾಲಿ 100 ರೂಪಾಯಿ ಬೆಲೆ ನಿಗದಿ ಮಾಡಲಾಗಿತ್ತು. ಈ ಬಾರಿ % ರಿಯಾಯಿತಿ ನಿಗದಿ ಮಾಡಲಾಗಿದೆ. ಮಾವಿನ ಹಣ್ಣು ಕೆಜಿಗೆ 32 ರಿಂದ ಶುರುವಾಗಿ 215 ರೂಪಾಯಿ ವರೆಗೆ ಇದೆ. ಹಲಸಿನ‌ ಹಣ್ಣು ಕೆಜಿಗೆ 25 ರೂ ನಿಗದಿಯಾಗಿದೆ. ಎಲ್ಲೋ‌ ಕೆಮಿಕಲ್‌ ಮಿಕ್ಸ್ ಮಾಡಿ ಹಣ್ಣು ಮಾಡೋ ಹಣ್ಣುಗಳನ್ನ ತಿನ್ನೋ ಬದಲು ನೈಸರ್ಗಿಕವಾಗಿ ಹಣ್ಣಾಗಿರೋ ಮಾವು ಹಲಸನ್ನ ನೇರವಾಗಿ ರೈತರಿಂದಲೇ ಖರೀದಿಸಿ ತಿನ್ನಲು ಜನರು ಮುಗಿ ಬೀಳುತ್ತಿದ್ದಾರೆ.

error: Content is protected !!