ಕೂಗು ನಿಮ್ಮದು ಧ್ವನಿ ನಮ್ಮದು

ಭೀಮಾತೀರದ ಕುಖ್ಯಾತ ಹಂತಕನ ಪತ್ನಿ ಕೋರ್ಟ್ ಗೆ ಶರಣಾಗತಿ: ವಿಮಲಾಬಾಯಿ ಚಡಚಣ ಸೆರೆಂಡರ್

ವಿಜಯಪುರ: ಎಡಿಜಿಪಿ ಅಲೋಕಕುಮಾರ ಭೀಮಾತೀರಕ್ಕೆ ಭೇಟಿ ನೀಡಿ ಈ ಭಾಗದಲ್ಲಿ ನಡೆಯುವ ಚಟುವಟಿಕೆ ಬಂದ್ ಆಗಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಜೊತೆಗೆ ಭೀಮಾ ತೀರದ ಚಡಚಣ ಕುಟುಂಬದ ಮಲ್ಲಿಕಾರ್ಜುನ ಚಡಚಣ ಹಾಗೂ ವಿಮಲಾಬಾಯಿ ಚಡಚಣ ಸೆರೆಂಡರ್ ಆಗಬೇಕು.  ಇರದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಹೀಗಾಗಿ ಇಂದು ಭೀಮಾ ತೀರದ ಹಂತಕ ಮಲ್ಲಿಕಾರ್ಜುನ ಚಡಚಣ ಪತ್ನಿ ವಿಮಲಾಬಾಯಿ ಚಡಚಣ ವಿಜಯಪುರ ಕೋರ್ಟ್ ಗೆ ಸ್ವತಃ ತಾನಾಗೆ ಬಂದು ಶರಣಾಗತಿ ಆಗಿದ್ದಾಳೆ. ಈ ಕುರಿತು ಒಂದು ವರದಿ ಇಲ್ಲಿದೆ.

ಹೌದು, ಭೀಮಾ ತೀರ ರಕ್ತಪಾತಕ್ಕೆ ಕುಖ್ಯಾತಿಯಾಗಿತ್ತು. ರಕ್ತಪಾತಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಖಾಕಿ ಪಡೆ ಮುಂದಾಗಿದ್ದು, ಭೀಮಾತೀರದ ಮೋಸ್ಟ್ ವಾಂಟೆಡ್ ಮಲ್ಲಿಕಾರ್ಜುನ ಚಡಚಣ ಹಾಗೂ ಆತನ ಪತ್ನಿ ವಿಮಲಾಬಾಯಿ ಸೇರಿ 40 ಜನರ ಮೇಲೆ ಮಹಾದೇವ ಸಾಹುಕಾರ ಭೈರಗೊಂಡ ಹತ್ಯೆ ಯತ್ನ ಕೇಸ್ ನಲ್ಲಿ ಪ್ರಕರಣ ದಾಖಲಾಗಿತ್ತು. ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಮಲ್ಲಿಕಾರ್ಜುನ ಚಡಚಣ ಕುಟುಂಬಗಳ ಮಧ್ಯೆ ದಶಕಗಳ ವೈಷಮ್ಯವಿದೆ. ಕಳೆದ 18 ವರ್ಷಗಳಿಂದ ಮಲ್ಲಿಕಾರ್ಜುನ ಚಡಚಣ ನಾಪತ್ತೆಯಾಗಿದ್ದಾನೆ.

ಮಲ್ಲಿಕಾರ್ಜುನ ಚಡಚಣ ಪುತ್ರ ಧರ್ಮರಾಜ ಚಡಚಣ ನಕಲಿ ಎನ್ ಕೌಂಟರ್ ನಲ್ಲಿ ನಿಗೂಢ ಹತ್ಯೆಯಾದ ಗಂಗಾಧರ ಚಡಚಣ ಸೇಡು ತೀರಿಸಿಕೊಳ್ಳಲು ಮಹಾದೇವ ಸಾಹುಕಾರ ಹತ್ಯೆಗೆ ಭೂಗತ ವಾಗಿದ್ದುಕೊಂಡು ಸ್ಕೇಚ್ ಹಾಕಿದ್ರು. 2020 ನವೆಂಬರ್ 2 ರಂದು ಮಹಾದೇವ ಬೈರಗೊಂಡ ಮೇಲೆ ಅಟ್ಯಾಕ್ ನಡೆದ ಬಳಿಕ ವಿಮಲಾಬಾಯಿ ಭೂಗತಳಾಗಿದ್ದಳು. ಕೆಲ ದಿನಗಳ ಹಿಂದಷ್ಟೇ ಎಡಿಜಿಪಿ ಅಲೋಕ್‌ಕುಮಾರ್ ಚಡಚಣ ಪೊಲೀಸ್ ಠಾಣಾ ಆವರಣದಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಮಲ್ಲಿಕಾರ್ಜುನ ಚಡಚಣ ಬಣದವರೊಂದಿಗೆ ಶಾಂತಿ ಸಭೆ ನಡೆಸಿದ್ದರು.

ಈ ವೇಳೆ ಮಲ್ಲಿಕಾರ್ಜುನ ಚಡಚಣ ಹಾಗೂ ವಿಮಲಾ ಬಾಯಿ ಚಡಚಣ ಶರಣಾಗತಿ ಆಗುವಂತೆ ಸೂಚಿಸಿದ್ದರು. ಆ ಬೆನ್ನಲ್ಲೇ ವಿಜಯಪುರ ಜಿಲ್ಲಾ ಪೊಲೀಸರು ಉದ್ಘೋಷಣೆ ಹೊರಡಿಸಿ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಡಂಗೂರ ಸಾರಿದ್ದರು. ಆ ಬೆನ್ನಲ್ಲೆ ಭೀಮಾತೀರದ ಮಾಸ್ಟರ್ ಮೈಂಡ್ ನಟೋರಿಯಸ್ ಹಂತಕ ಮಲ್ಲಿಕಾರ್ಜುನ್ ಚಡಚಣ ಪತ್ನಿ ವಿಮಲಾಬಾಯಿ ಚಡಚಣ ಕೋರ್ಟ್ ಗೆ ಶರಣಾಗತಿ ಆಗಿದ್ದಾಳೆ. ಆಸ್ತಿ ಜಪ್ತಿಯಾಗುವ ಹೆದರಿಕೆಯಿಂದ ವಿಮಲಾಬಾಯಿ ಚಡಚಣ ಜೊತೆಗೆ ಸಹಚರ ಸೋನ್ಯಾ ರಾಠೋಡ ಇಂದು ಕೊರ್ಟಿಗೆ ಹಾಜರಾಗಿದ್ದಾರೆ. ಮಹಾದೇವ ಬೈರಗೊಂಡ ಮೇಲೆ ನಡೆದ ಅಟ್ಯಾಕ್‌ನಲ್ಲಿ ವಿಮಲಾಬಾಯಿ ಎ2 ಆರೋಪಿ, ಸೋನ್ಯಾ ರಾಠೋಡ ಎ39 ಆರೋಪಿಯಾಗಿದ್ದಾನೆ. ಇಬ್ಬರು 4ನೇ JMFC ನ್ಯಾಯಾಲಯಕ್ಕೆ ಸೆರೆಂಡರ್‌ ಆಗಿದ್ದು. ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ. ಬಳಿಕ ಪೊಲೀಸರು ಕೋರ್ಟ್ ನಿಂದ ಅನುಮತಿ ಪಡೆದು ಮಹಾದೇವ ಸಾಹುಕಾರ ಬೈರಗೊಂಡ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ವಿಮಲಾಬಾಯಿ ಚಡಚಣಳನ್ನು ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ವೈದ್ಯಕೀಯ ಪರೀಕ್ಷೆ ನಡೆಸಿ ವಿಮಲಾಬಾಯಿ ಚಡಚಣ ಹಾಗೂ ಸೋನ್ಯಾ ರಾಠೋಡರನ್ನ ಜೈಲಿಗೆ ಅಟ್ಟಿದ್ದಾರೆ‌. ವಿಮಲಾ ಬಾಯಿ ಚಡಚಣ ಮೇಲೆ 8 ಕೇಸ್ ಗಳಿವೆ. ಇನ್ನೂ ಮಹಾದೇವ ಸಾಹುಕಾರ ಭೈರಗೊಂಡ ಹತ್ಯೆ ಕೇಸ್ ನಲ್ಲಿ 40 ಆರೋಪಿಗಳಿದ್ದು, 38 ಆರೋಪಿಗಳು ಜೈಲುಪಾಲಾದಂತಾಗಿದೆ. ಮಲ್ಲಿಕಾರ್ಜುನ ಚಡಚಣ ಹಾಗೂ ಮಧ್ಯಪ್ರದೇಶ ಮೂಲದ ಸಿಂಗ್ ಇಬ್ಬರು ಭೂಗತವಾಗಿದ್ದು, ಅವರಿಬ್ಬರನ್ನು ದಸ್ತಗಿರಿ ಮಾಡುವಲ್ಲಿ ಪೊಲೀಸರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ನೇತೃತ್ವದಲ್ಲಿ ಬಲೆ ಬೀಸಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಮಲ್ಲಿಕಾರ್ಜುನ ಚಡಚಣ ಭೂಗತವಾಗಿರೋ ಶಂಕೆಯಿದ್ದು, ಸದ್ಯದಲ್ಲೇ ಮಲ್ಲಿಕಾರ್ಜುನ ಚಡಚಣ ಸೇರಿ ಇಬ್ಬರನ್ನೂ ಬಂಧಿಸ್ತೇವೆ ಅಂತಿದ್ದಾರೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ಸದ್ಯ ಪೋಲಿಸರ ಖಡಕ್ ಎಚ್ಚರಿಕೆ ಹಿನ್ನಲೆ ಇಂದು ಕೊರ್ಟ ಗೆ ಹಾಜರಾದ ವಿಮಲಾಬಾಯಿಯನ್ನು ವಿಜಯಪುರ ಕೇಂದ್ರ ಕಾರಾಗ್ರಹಕ್ಕೆ ತಳ್ಳಿದ್ದಾರೆ. ಆಸ್ತಿ ಜಪ್ತಿಯಾಗುವ ಭಯದಿಂದ ವಿಮಲಾಬಾಯಿ ಬಂದು ಸೆರೆಂಡರ್ ಆಗಿದ್ದಾಳೆ ಎಂಬುದು‌ ಪೋಲಿಸ್ ಮೂಲಗಳ ಮಾಹಿತಿ. ಇನ್ನಾದರೂ ಈ ಪ್ರಕರಣದ ಇನ್ನೂಳಿದ ಇಬ್ಬರು ಆರೋಪಿಗಳು ಬಂದು ಸೆರೆಂಡರ್ ಆಗ್ತಾರಾ..? ಅಥವಾ ಪೊಲಿಸರೇ ಅವರ ಹೆಡೆಮುರಿ ಕಟ್ತಾರಾ ಅನ್ನೊದಕ್ಕೆ ಕಾಲವೇ ಉತ್ತರಿಸಲಿದೆ.

error: Content is protected !!