ಶಿಕ್ಷಣ ಕ್ಷೇತ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಟೀಕಿಸಿದ್ದಾರೆ. ಇತ್ತೀಚಿನ ವಾರ್ಷಿಕ ಶಿಕ್ಷಣ ಸ್ಥಿತಿ ವರದಿ ಅನ್ನು ಉಲ್ಲೇಖಿಸಿದ ಕಾಂಗ್ರೆಸ್ ಅಧ್ಯಕ್ಷರು ಪಠ್ಯಪುಸ್ತಕಗಳನ್ನು ಓದಲು ಸಾಧ್ಯವಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದಕ್ಕೆ ನಾನು ಎಫ್ ನೀಡುತ್ತೇನೆ. ‘ಶಿಕ್ಷಣ’ ಕುರಿತ ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್ ಫೇಲ್ ಎಂದು ತೋರಿಸಲು ಎಫ್ ಎಂದು ನೀಡಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ASER 2022 ಡೇಟಾವನ್ನು ಉಲ್ಲೇಖಿಸಿದ ಅವರು ಇದು ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ II ನೇ ತರಗತಿಯ ಪಠ್ಯಪುಸ್ತಕಗಳನ್ನು ಓದಲು ಸಮರ್ಥವಾಗಿರುವ III ನೇ ತರಗತಿ ವಿದ್ಯಾರ್ಥಿಗಳ ಸಂಖ್ಯೆಯು 2018ರಲ್ಲಿ 27.3% ಇದ್ದದ್ದು 2022 ರಲ್ಲಿ 20% ಕ್ಕೆ ಇಳಿದಿದೆ. ಹಾಗೆಯೇ, IIನೇ ತರಗತಿ ಪಠ್ಯಪುಸ್ತಕಗಳನ್ನು ಓದಬಲ್ಲ 5ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ 2018 ರಲ್ಲಿ 50.5% ಇದ್ದದ್ದು 2022 ರಲ್ಲಿ 42.8% ಕ್ಕೆ ಇಳಿದಿದೆ ಎಂದಿದ್ದಾರೆ
ನರೇಂದ್ರ ಮೋದಿ ಜಿ, ಸರ್ಕಾರಿ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ನೀವು ಇಂದು ವಿತರಿಸುತ್ತಿರುವ 71,000 ನೇಮಕಾತಿ ಪತ್ರಗಳು ಕೇವಲ ‘ಸಾಗರದಲ್ಲಿ ಒಂದು ಹನಿ’. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ನೀವು ವಾರ್ಷಿಕವಾಗಿ 2 ಕೋಟಿ ಹೊಸ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದ್ದೀರಿ. 8 ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳು ಎಲ್ಲಿವೆ? ಎಂಬುದನ್ನು ಯುವಕರಿಗೆ ಹೇಳಿ ಎಂದು ಖರ್ಗೆ ಎರಡು ದಿನಗಳ ಕೇಳಿದ್ದರು.
ಈ ಹಿಂದೆ, ಸುಮಾರು 30 ಲಕ್ಷ ಖಾಲಿ ಹುದ್ದೆಗಳಿಗೆ ಬದಲಾಗಿ ಹೊಸದಾಗಿ ಸೇರ್ಪಡೆಗೊಂಡ ಸರ್ಕಾರಿ ನೌಕರರಿಗೆ 71,000 ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಖರ್ಗೆ ಟೀಕಿಸಿದ್ದಾರೆ