ಕೂಗು ನಿಮ್ಮದು ಧ್ವನಿ ನಮ್ಮದು

ಫೋನ್ ಬಂದ್ರೆ ಸಾಕು ಒಗಿಬೇಕು ಅನಿಸಾತೇತಿ, ಆರಾಮ್ ಹೊತ್ಕೊಂಡ ಮಲ್ಕೊಬೇಕು ಅನಿಸಾತೇತಿ – ನೆರೆ ಸಂಸತ್ರಸ್ತರ ಬಗ್ಗೆ ಕುಮಟಳ್ಳಿ ನಿರ್ಲಕ್ಷ್ಯದ ಮಾತು

ಚಿಕ್ಕೋಡಿ/ಬೆಳಗಾವಿ: ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರ ಬಗ್ಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ನಿರ್ಲಕ್ಷ್ಯದ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಈ ವೀಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ. ಇನ್ನೂ ಸಂತ್ರಸ್ತರು ಶಾಸಕರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಹಲವು ದಿನಗಳ ಹಿಂದೆಯೇ ಶಾಸಕರು ತಮ್ಮ ಆಪ್ತರ ಬಳಿ ಈ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಈ ಪ್ರವಾಹ ಸಂತ್ರಸ್ತರನ್ನು ನಿರ್ಲಕ್ಷಿಸಿ ಕುಮಟಳ್ಳಿಯವರು ಮಾತನಾಡಿದ್ದಾರೆ. ಇನ್ನೂ ಫೋನ್ ಬಂದ್ರೆ ಸಾಕು ಒಗಿಬೇಕು ಅನಿಸುತ್ತದೆ ಎಂದಿದ್ದಾರೆ.

ಇನ್ನೂ ನಿಮಗೆ ತಿಳಿಯದ ಅಷ್ಟು ತಲಿ ಬ್ಯಾರೆ ಬ್ಯಾರೆ ಕಡೆ ಇತಿ, ಒಂದೇ ಕಡೆ ಹೊತಕೊಂಡ ಆರಾಮ ಆಗಿ ಮಲಗಬೇಕು ಅನಿಸುತ್ತದೆ. ಎಂದು ಕುಮಟಳ್ಳಿ ಹೇಳಿದ್ದಾರೆ. ಇನ್ನೂ ಮೈಯಲ್ಲ ಬಿಗದೈತಿ, ಫೋನ್ ಬಂದರೆ ಸಾಕು ಫೋನ್ ಏತ್ತಿ ಒಗಿಬೇಕು ಅನಸಾತೈತಿ ಎಂದು ತಮ್ಮ ಆಪ್ತರ ಮುಂದೆ ಕುಮಟಳ್ಳಿ ಹೇಳಿದ್ದಾರೆ. ಇದೀಗ ಈ ವೀಡಿಯೋ ಎಲ್ಲೆಡೆ ವೈರಲ್ ಆಗ್ತಾಯಿದೆ.ಇನ್ನೂ ಶಾಸಕರ ಮುಂದಲ್ಲದೆ ನಮ್ಮ ಪರಿಸ್ಥಿತಿಯನ್ನು ಇನ್ಯಾರ ಮುಂದೆ ಹೇಳಿಕೊಳ್ಳಬೇಕು. ಶಾಸಕರೇ ಹೀಗೆ ಮಾತನಾಡಿದ್ರೆ ಹೇಗೆ, ಈ ಪ್ರವಾಹದಲ್ಲಿ ನೂರಾರು ಜನ ಸಿಲುಕಿ ನರಳುತ್ತಿದ್ದಾರೆ. ಜೊತೆಗೆ ಇಂತಹ ಸಂದರ್ಭದಲ್ಲಿ ಸಹಾಯ ಮಾಡುವುದು ಬಿಟ್ಟು, ಇಂತಹ ನಿರ್ಲಕ್ಷ್ಯದ ಮಾತುಗಳನ್ನಾ ಇವರು ಆಡಿದ್ತಾರೆ  ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ರು.

error: Content is protected !!