ಕೂಗು ನಿಮ್ಮದು ಧ್ವನಿ ನಮ್ಮದು

ಚಪಾತಿಯಲ್ಲಿ 500 ರೂ.ಹಾಕಿ ಬೇಯಿಸಿದ್ರೆ ಹೊರಬರುತ್ತೆ 2000 ರೂ! ಮ್ಯಾಜಿಕ್ ವಿಡಿಯೋ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಒಂದಲ್ಲ ಒಂದು ವಿಭಿನ್ನ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಫನ್ನಿ ವಿಡಿಯೋ, ಮದುವೆಯ ವಿಡಿಯೋ, ದುಃಖ-ಸಂತೋಷ ಹೀಗೆ ಬಗೆ ಬಗೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇಂದು ನಾವು ಹೇಳಹೊರಟಿರೋದು ಮ್ಯಾಜಿಕ್ ವಿಡಿಯೋ ಬಗ್ಗೆ.

ಬೆಳಗ್ಗಿನ ಉಪಹಾರಕ್ಕೆ ನಾನಾ ಬಗೆಯ ತಿಂಡಿಗಳನ್ನು ಸೇವಿಸುತ್ತೇವೆ. ಅದರಲ್ಲೂ ಭಾರತೀಯರ ಫೇವರೇಟ್ ಬ್ರೇಕ್’ಫಾಸ್ಟ್ ಎಂದರೆ ದೋಸೆ, ಇಡ್ಲಿ, ಚಪಾತಿ, ಚಿತ್ರಾನ್ನ, ಉಪ್ಪಿಟ್ಟು, ಪರೋಟ ಹೀಗೆ ಬಾಯಿಗೆ ರುಚಿ ಕೊಡುವ ಅನೇಕ ತಿನಿಸುಗಳಿವೆ. ಆದರೆ ಈ ಬ್ರೇಕ್’ಫಾಸ್ಟ್’ನಿಂದಲೇ ಮಹಿಳೆಯೊಬ್ಬಳು ಮ್ಯಾಜಿಕ್ ಮಾಡಿದ್ದಾಳೆ.

ಚಪಾತಿ ಮಾರಾಟ ಮಾಡುವುದರಲ್ಲಿ ಏನು ವಿಶೇಷವಿದೆ ಎಂದು ನೀವು ಯೋಚಿಸಬಹುದು. ಆದ್ರೆ ಆಕೆ ಮಾರಾಟ ಮಾಡುತ್ತಿರುವುದು ಸಾಮಾನ್ಯ ಪರೋಟವಲ್ಲ. ದುಡ್ಡಿನ ಪರೋಟಾ. ಅರೇ ಇದು ಹೇಗಪ್ಪಾ ಅಂತ ಆಲೋಚನೆ ಮಾಡುತ್ತಿದ್ದರೆ ಈ ವಿಡಿಯೋ ನೋಡಲೇಬೇಕು.

ಈ ವಿಡಿಯೋದಲ್ಲಿ ಕಾಣಿಸುತ್ತಿರುವಂತೆ, ಮಹಿಳೆ ಚಪಾತಿ ಹಿಟ್ಟನ್ನು ಸರಿಯಾಗಿ ನಾದಿಕೊಂಡು, ಅದರಲ್ಲಿ 500 ರೂಪಾಯಿ ನೋಟುಗಳನ್ನು ಹಾಕಿ ಲಟ್ಟಿಸುತ್ತಿದ್ದಾರೆ. ಆ ಬಳಿಕ ಎಣ್ಣೆ ಸವರಿ, ಚಪಾತಿಯನ್ನು ಕಾವಲಿ ಮೇಲೆ ತುಪ್ಪವನ್ನೆಲ್ಲ ಸವರಿ ಬೇಯಿಸುತ್ತಾರೆ. ಬೇಯಿಸಿದ ಚಪಾತಿ ತೆಗೆದ ಮೇಲೆ ಪರೋಟಾದಿಂದ 2000 ರೂಪಾಯಿ ಬರುತ್ತದೆ.

ಇಲ್ಲಿ ಮಹಿಳೆ 500 ರೂ.ನೋಟನ್ನು ಹಾಕಿ ಲಟ್ಟಿಸಿ, ಬೇಯಿಸಿದ ಮೇಲೆ 500 ರೂ.ಬದಲು, 2000 ರೂಪಾಯಿಯನ್ನು ಹೊರತೆಗೆಯುತ್ತಾರೆ. ಇದೇನು ಜಾದೂ? ಎಂದು ಎಂದು ನೆಟ್ಟಿಗರು ಯೋಚಿಸುತ್ತಿದ್ದಾರೆ. ಒಂದು ಕಡೆ ಈ ರೀತಿ ಆಲೋಚಿಸುತ್ತಿದ್ದರೆ, ಮತ್ತೊಂದು ಕಡೆ ಹಣ ಸುರಿದು ಚಪಾತಿ ಮಾಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸುತ್ತಿದ್ದಾರೆ

error: Content is protected !!