ಕೂಗು ನಿಮ್ಮದು ಧ್ವನಿ ನಮ್ಮದು

ನಿನ್ನೆ ಘೋಷಣೆ ಮಾಡಿದ್ದ 2 ಲಕ್ಷ ಸೇರಿ ಹರ್ಷ ಕುಟುಂಬಕ್ಕೆ 6 ಲಕ್ಷ ಕೊಟ್ಟು ಬರುವೆ: ಶಾಸಕ ರೇಣುಕಾಚಾರ್ಯ

ಬೆಂಗಳೂರು: ನಿನ್ನೆ ಘೋಷಣೆ ಮಾಡಿದ್ದ ಎರಡು ಲಕ್ಷ ರೂಪಾಯಿಗಳೊಂದಿಗೆ ಮತ್ತೆ ನಾಲ್ಕುಲಕ್ಷ ರೂಪಾಯಿ. ಸೇರಿಸಿ ಒಟ್ಟು ಆರು ಲಕ್ಷ ರೂಪಾಯಿಯನ್ನು ಮೃತ ಹರ್ಷ ಕುಟುಂಬಕ್ಕೆ ಕೊಟ್ಟು ಬರುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯಾದ M.P. ರೇಣುಕಾಚಾರ್ಯ ಹೇಳಿದ್ದಾರೆ. ಇನ್ನೂ ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಅಪ್ರತಿಮ ದೇಶಭಕ್ತನ ಹತ್ಯೆ ಯಾಗಿದೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ರಾಜ್ಯದಲ್ಲಿ ಹಾಗೂ ದೇಶದಲ್ಲಿ ನಮ್ಮದೇ ಸರ್ಕಾರವಿದೆ.

ಪ್ರಕರಣದ ತನಿಖೆಯನ್ನು NIA ಗೆ ವಹಿಸಬೇಕು. ಮೃತ ಹರ್ಷನ ಕುಟುಂಬಕ್ಕೆ ನಾನು ವೈಯಕ್ತಕವಾಗಿ ೨ ಲಕ್ಷ ರೂಪಾಯಿ ಕೊಟ್ಟಿದ್ದೇನೆ ಎಂದ್ರು. ಇನ್ನೂ ಆರೋಪಿಗಳನ್ನು ಬಂಧಿಸಿದರೆ ಸಾಲದು ಅವರನ್ನು ಎನ್‍ಕೌಂಟರ್ ಮಾಡಬೇಕು. ಅವರ ಕುಟುಂಬದ ಕಣ್ಣೀರನ್ನು ನೋಡಲು ಆಗುತ್ತಿಲ್ಲ. ಅವನಿಗೆ ಇಬ್ಬರು ಸಹೋದರಿಯರಿದ್ದಾರೆ. ನಿನ್ನೆ ಘೋಷಣೆ ಮಾಡಿದ್ದ ೨ ಲಕ್ಷ ರೂಪಾಯಿಗಳೊಂದಿಗೆ ಮತ್ತೆ ನಾಲ್ಕು ಲಕ್ಷ ರೂಪಾಯಿ ಸೇರಿಸಿ ಒಟ್ಟು ಆರು ಲಕ್ಷ ರೂಪಾಯಿ ಕೊಟ್ಟು ಬರುತ್ತೇನೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ಮೃತ ಹರ್ಷನ ದೇಹದಲ್ಲಿ ನಮ್ಮದೇ ಹಿಂದೂ ರಕ್ತ ಹರಿಯುತ್ತಿತ್ತು. ಎಲ್ಲ ಮುಸ್ಲಿಮರು ಭಯೋತ್ಪಾದಕರಲ್ಲ. ಘಟನೆಗೆ ಸಂಬಂಧಿಸಿದಂತೆ ನಾನು ಮುಸ್ಲಿಮರ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಮೃದುಧೋರಣೆ ತೋರಿದ್ದೇವೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದ್ರು. ಸರ್ಕಾರದ ವೈಫಲ್ಯದಿಂದ ಘಟನೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಪ್ರಚೋದನಕಾರಿ ಹೇಳಿಕೆಗಳು ಇದಕ್ಕೆ ಕಾರಣ. ಇಂತಹ ಸಂದರ್ಭದಲ್ಲಿ ಸರ್ಕಾರದ ಜೊತೆ ನಿಲ್ಲಬೇಕಿತ್ತು. ನನಗೆ ಶಾಸಕ ಸ್ಥಾನ, ಹುದ್ದೆ ಮುಖ್ಯವಲ್ಲ. ನನಗೆ ಹಿಂದುತ್ವ ಮುಖ್ಯ. ಸವಾಲು ಹಾಕ್ತೇನೆ, ಇನ್ಮುಂದೆ ಅಟ್ಯಾಕ್ ಮಾಡಿದ್ರೆ ಸುಮ್ಮನಿರಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ್ರು.

error: Content is protected !!