ಕೂಗು ನಿಮ್ಮದು ಧ್ವನಿ ನಮ್ಮದು

ಪುನೀತ್ ಜೊತೆ ನಾನು ಕೂಡ ಕೈ ಜೋಡಿಸುತ್ತೇನೆ: ರೇಣುಕಾಚಾರ್ಯ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಸಮಾಧಿಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಭೇಟಿ ನೀಡಿ ನಮನ ಸಲ್ಲಿಸಿದ್ರು. ಇದೇ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ರೇಣುಕಾಚಾರ್ಯ ಪುನೀತ್ ರಾಜ್ ನಮ್ಮನ್ನು ಅಗಲಿ ಇವತ್ತಿಗೆ ಎಂಟು ದಿನಗಳಾಯಿತು. ಪುನೀತ್ ಅಕಾಲಿಕ ನಿಧನದಿಂದ ಅವ್ರ ಕುಟುಂಬಕ್ಕೆ, ಅಭಿಮಾನಿಗಳಿಗೆ, ನಾಡಿಗೆ ತುಂಬಲಾರದ ನಷ್ಟವಾಗಿದೆ. ಅಪ್ಪು ಸಾಮಾಜಿಕ ಕಳಕಳಿಯ ಚಿತ್ರಗಳು ನಮಗೆ ಇಷ್ಟವಾಗಿವೆ.

ಅಪ್ಪು ಸೇವೆ ಅಪಾರವಾದದ್ದು, ಹಳ್ಳಿ, ಹಳ್ಳಿಗಳಲ್ಲಿ ಗಲ್ಲಿ, ಗಲ್ಲಿಗಳಲ್ಲಿ ಭಾವಚಿತ್ರಗಳನ್ನಾಗಿ ಅಭಿಮಾನಿಗಳು ಗೌರವ ಸಲ್ಲಿಸಿದ್ದಾರೆ ಎಂದ್ರು. ನಂತರ ಕೋವಿಡ್ ಅವಧಿಯಲ್ಲಿ ನಾನು ರಸಮಂಜರಿ ಕಾರ್ಯಕ್ರಮಗಳನ್ನ ಮಾಡಿದ್ದೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಪುನೀತ್ ರಾಜ್ ಕುಮಾರ್‍ರನ್ನು ಕ್ಷೇತ್ರಕ್ಕೆ ಕರೆದೊಯ್ದು ಕಾರ್ಯಕ್ರಮ ನೀಡಬೇಕೆಂದು ಅಂದುಕೊಂಡಿದ್ದೆ ಆದ್ರೆ ಆಗಲಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ್ರು.

ಶಕ್ತಿಧಾಮದಲ್ಲಿ ಸಾವಿರಾರು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಅದಕ್ಕೆ ನಾನು ನನ್ನ ಕೈಲಾದ ಸೇವೆ ಮಾಡಲು ಬಯಸುತ್ತೇನೆ. ಈ ಬಗ್ಗೆ ಕುಟುಂಬದೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ರು.

error: Content is protected !!