ದಾವಣಗೆರೆ: ಲಂಚ ಸ್ವೀಕರಿಸುವಾಗ ನಗರ ಯೋಜನಾ ಪ್ರಾಧಿಕಾರಗಳು ಸಹಾಯಕ ನಿರ್ದೇಶಕ ಲೋಕಾಯುಕ್ತ ಬಲೆಗೆ ಬಿದ್ದಿರು ವಂತಹ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಲೇಔಟ್ನಲ್ಲಿ ನಡೆದಿದೆ. ಕೆ.ಆರ್.ಮಂಜು ಹಾಗೂ ಭರತ್ ಬಲೆಗೆ ಬಿದ್ದ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕರು.
ಕೊಂಡಜ್ಜಿ ಗ್ರಾಮದಲ್ಲಿ ಲೇಔಟ್ ನಿರ್ಮಿಸುತ್ತಿದ್ದು, ಶ್ರೀನಿವಾಸ್ ಎನ್ನುವವರಿಂದ ಲೇಔಟ್ ನಿರ್ಮಾಣಕ್ಕೆ ಪರವಾನಗಿ ನೀಡಲು 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ 1 ಲಕ್ಷ ರೂ. ಲಂಚ ಸ್ವೀಕರಿಸಿದ್ದ ಕೆ.ಆರ್.ಮಂಜು ಮತ್ತು ಭರತ್, ಇಂದು 2 ಲಕ್ಷ ರೂ. ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ. ಸದ್ಯ ಇಬ್ವರು ಅಧಿಕಾರಿಗಳನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.