ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯ(ಸ್ವಾಯತ್ತ), ಬಿ.ಬಿ.ಎ. 6ನೇ ಸೆಮಿಸ್ಟರ್ ಫಲಿತಾಂಶ ಪ್ರಕಟ: ನಾಲ್ವರು ವಿದ್ಯಾರ್ಥಿನಿಯರ ಮೇಲುಗೈ

ಬೆಳಗಾವಿ: ಬೆಳಗಾವಿಯ ಪ್ರತಿಷ್ಠಿತ ಲಿಂಗರಾಜ ಸ್ವಾಯತ್ತ ಮಹಾವಿದ್ಯಾಲಯವು ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ 2020 ರಲ್ಲಿ ಜರುಗಿಸಿದ ಬಿಬಿಎ 6ನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 24.10.2020 ರಂದು ಪ್ರಕಟಿಸಿದೆ. ಈ ಕುರಿತು ಪ್ರಾಚಾರ್ಯರಾದ ಡಾ.ಆರ್.ಎಂ.ಪಾಟೀಲ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿಗಳಾದ ಡಾ.ಬಿ.ಎಮ್.ತೇಜಸ್ವಿಯವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಬಿ.ಬಿ.ಎ. 6ನೇ ಸೆಮಿಸ್ಟರ್ ಫಲಿತಾಂಶವು ಒಟ್ಟು 98.27% ಶೇಕಡಾವಾರು ಫಲಿತಾಂಶವನ್ನು ಮಾಡಿದೆ. ಬಿ.ಬಿ.ಎ. 6ನೇ ಸೆಮಿಸ್ಟರ್‌ನಲ್ಲಿ ಮೊದಲ ರ‍್ಯಾಂಕ್‌ನ್ನು ಇಬ್ಬರು ವಿದ್ಯಾರ್ಥಿನಿಯರು ಪಡೆದಿದ್ದು, ವಿದ್ಯಾರ್ಥಿನಿಯರಾದ ನಿಧಿಶ್ರೀ ಉಜ್ಜಿನಕೊಪ್ಪ (97.38%) ಹಾಗೂ ಪ್ರಿಯದರ್ಶಿನಿ ಎಸ್ ಮಹಾಲೆ (97.38%) ಮತ್ತು ದ್ವಿತೀಯ ರ‍್ಯಾಂಕ್‌ನ್ನು ಆಶಾ ಎಂ.ಪಾಟೀಲ (95.38%), ತೃತೀಯ ರ‍್ಯಾಂಕ್‌ನ್ನು ಸುಷ್ಮಾ ರಾನೆ (94.75%) ಕ್ರಮವಾಗಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಬಿಬಿಎ ಪ್ರಾಚಾರ್ಯರಾದ ಡಾ.ಪ್ರಕಾಶ ಕಡಕೋಳ ಹಾಗೂ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ. ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು www.kleslingarajcollege.edu.in ವೆಬ್‌ಸೈಟ್‌ನ್ನು ಸಂಪರ್ಕಿಸಲು ಕೋರಲಾಗಿದೆ.

error: Content is protected !!