ಕೂಗು ನಿಮ್ಮದು ಧ್ವನಿ ನಮ್ಮದು

ಗಳತಗಾ, ಭಿಮಾಪೂರವಾಡಿ
ಗ್ರಾಮಗಳ ಹಿತಕ್ಕಾಗಿ ನಿಮ್ಮ ಆಯ್ಕೆ ಬಿಜೆಪಿಯೇ ಆಗಿರಲಿ: ಬಸವಪ್ರಸಾದ ಜೊಲ್ಲೆ

ನಿಪ್ಪಾಣಿ: ನಿಪ್ಪಾಣಿ ಮತಕ್ಷೇತ್ರದ ಗಳತಗಾ ಹಾಗೂ ಭಿಮಾಪೂರವಾಡಿ ಗ್ರಾಮದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ, ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯ ಬಸವಪ್ರಸಾದ ಜೊಲ್ಲೆ ಯವರು ಮನೆ ಮನೆಗೆ ತೆರಳಿ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶಶಿಕಲಾ ಜೊಲ್ಲೆ ಪರವಾಗಿ ಪ್ರಚಾರ ಕಾರ್ಯ ನಡೆಸಿದರು.

ಶಶಿಕಲಾ ಜೊಲ್ಲೆಯವರು ಮಾಡಿರುವ ಅಭಿವೃದ್ದಿ ಕಾರ್ಯಗಳ ಮಾಹಿತಿ ನೀಡಿ, ಕ್ಷೇತ್ರದಲ್ಲಿ ಮುಂದೆಯೂ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿರಲು ಕಮಲದ ಗುರುತಿಗೆ ಮತ ನೀಡಿ, ಆಶೀರ್ವದಿಸಿ ಎಂದು ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರ ಬಾಂಧವರು ಉಪಸ್ಥಿತರಿದ್ದರು.

error: Content is protected !!