ನಿಪ್ಪಾಣಿ: ನಿಪ್ಪಾಣಿ ನಗರದಲ್ಲಿ ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯರಾದ ಧನಂಜಯ್ ಮಹಾಡಿಕ ಅವರು ಜೊಲ್ಲೆ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.
ವಿಧಾನಸಭಾ ಚುನಾವಣೆ ಹಿನ್ನೆಲೆ ನಿಪ್ಪಾಣಿ ನಗರದ ವಾರ್ಡ್ ನಂ. 16, 17 ಮತ್ತು 23 ರಲ್ಲಿ, ರಾಜ್ಯಸಭಾ ಸದಸ್ಯರಾದ ಧನಂಜಯ್ ಮಹಾಡಿಕ ಮತ್ತು ಸಚಿವೆ ಶಶಿಕಲಾ ಜೊಲ್ಲೆ ಯವರು ಮನೆ-ಮನೆಗೆ ತೆರಳಿ ಮತಯಾಚಿಸಿ, ಕ್ಷೇತ್ರದಲ್ಲಿ ಮುಂದೆಯೂ ಅಭಿವೃದ್ಧಿ ಕಾರ್ಯಗಳು ಸದಾ ಇದೇ ರೀತಿ ಸಾಗಲು ಕಮಲದ ಗುರುತಿಗೆ ಮತ ನೀಡಿ, ನನಗೆ ಆಶೀರ್ವದಿಸಿ ಎಂದು ಬೆಂಬಲ ಕೋರಿದರು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಅಮೀತ ರಣಧೀವೆ, ನಗರಸಭೆ ಅಧ್ಯಕ್ಷರಾದ ಜಯವಂತ ಭಾಟಲೆ, ಸದಸ್ಯರು, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಮತದಾರ ಬಾಂಧವರು ಉಪಸ್ಥಿತರಿದ್ದರು.