ಮೈಸೂರು: ಮೈಸೂರಿನಲ್ಲಿ ಎರಡು ಕೆಜಿ ಬೃಹತ್ ಗಾತ್ರದ ನಿಂಬೆ ಹಣ್ಣು ಸಿಕ್ಕಿದ್ದು, ನಿಂಬೆ ಹಣ್ಣನ್ನು ನೋಡಿದ ಅಲ್ಲಿಯ ಜನರು ಅಚ್ಚರಿ ಕೊಂಡಿದ್ದಾರೆ.
ಮೈಸೂರಿನ H.D ಕೋಟೆಯ ಸರಗೂರಿನಲ್ಲಿ ಒಂದುಅಪರೂಪದ ನಿಂಬೆಹಣ್ಣು ಸಿಕ್ಕಿದೆ. ಸರಗೂರು ತಾಲೂಕಿನ ಬಿದರಹಳ್ಳಿ ಸರ್ಕಲ್ ಹತ್ತಿರ ಇರುವ ಬೇಕರಿ ಮಾಲೀಕ ಸನೋಜ್ ಅವರ ಹಿತ್ತಲಿನಲ್ಲಿ ಒಂದು ಅಪರೂಪದ ನಿಂಬೆ ಹಣ್ಣು ಆಗಿದೆ.
ಈ ನಿಂಬೆ ಹಣ್ಣಿನ ಗಿಡದಲ್ಲಿ ಮೂರು ನಿಂಬೆ ಹಣ್ಣುಗಳು ಆಗಿವೆ. ಆದ್ರೆ ಒಂದರ ಗಾತ್ರ ಮಾತ್ರ ಬರೋಬ್ಬರಿ ಎರಡು ಕೆಜಿ ೧೫೦ ಗ್ರಾಂ ನಷ್ಟು. ಇನ್ನೂ ಈ ಅಧಿಕ ತೂಕ ವಿರುವ ಅಪರೂಪದ ನಿಂಬೆ ಹಣ್ಣನ್ನು ನೋಡಿ ಅಲ್ಲಿಯ ಜನರು ಅಚ್ಚರಿ ಪಟ್ಟಿದ್ದಾರೆ. ನಿಂಬೆ ಹಣ್ಣಿನ ಗಿಡದಲ್ಲಿ ಇನ್ನೂ ಎರಡೂ ನಿಂಬೆ ಕಾಯಿಗಳಿದ್ದು, ಅವುಗಳ ಗಾತ್ರವು ೨ ಕೆ.ಜಿ ಬರುವವರೆಗೂ ನೋಡಿಕೊಳ್ಳುವುದಾಗಿ ಸನೋಜ್ ಹೇಳಿದ್ದಾರೆ. ಕೃಷಿ ಇಲಾಖೆ ತಜ್ಞರು ಇಂಥ ನಿಂಬೆಹಣ್ಣಿನ ಗಿಡವನ್ನು ಪೋಷಿಸಿ, ತಳಿಗಳನ್ನು ಅಭಿವೃದ್ಧಿ ಪಡಿಸಿದ್ರೆ ಉತ್ತಮ ಎಂದು ಸ್ಥಳೀಯರು ತೀಳಿಸಿದ್ದಾರೆ.