ಕೂಗು ನಿಮ್ಮದು ಧ್ವನಿ ನಮ್ಮದು

ನಾನು ಯಾರನ್ನೂ ಟೂರ್ ಗೆ ಕಳಿಸುತ್ತಿಲ್ಲ, ಒತ್ತಡಕ್ಕೆ ಮಣಿಯದೆ ಧೈರ್ಯದಿಂದ ಮತ ಚಲಾಯಿಸಿ: ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ: ಡಿ.10 ರಂದು ವಿಧಾನ ಪರಿಷತ್ ಚುನಾವಣೆ ಇದೆ. ಆದರೆ ಕೆಲವರು ಲಕ್ಷ್ಮಿ ಹೆಬ್ಬಾಳಕರ್ ಟೂರ್ ಅರೇಂಜ್ ಮಾಡಿದ್ದಾರೆ. ಹೋಗೋಣ ಎಂದು ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಆದರೆ ನಾನು ಯಾವುದೇ ಟೂರ್ ಅರೇಂಜ್ ಮಾಡಿಲ್ಲ, ಯಾರನ್ನೂ ಟೂರ್ ಗೆ ಕಳಿಸುತ್ತಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ವಿಡೀಯೋ ಮಾಡಿ ಹಂಚಿಕೊಂಡಿರುವ ಅವರು, ಯಾರೂ ಯಾಮಾರದೆ, ಯಾವುದೇ ಒತ್ತಡ, ಧಮ್ಕಿಗಳಿಗೆ ಮಣಿಯದೆ, ಇಲ್ಲೇ ಇದ್ದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿರುವ ಮತದಾನದ ಹಕ್ಕು ಚಲಾಯಿಸಿ. ನಾನು ಸದಾ ನಿಮ್ಮೊಂದಿಗಿರುತ್ತೇನೆ. ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ನ ಎಲ್ಲ ಮುಖಂಡರು ನಿಮ್ಮೊಂದಿಗಿರುತ್ತಾರೆ. ಹೆದರಬೇಡಿ. ಧೈರ್ಯದಿಂದ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.

error: Content is protected !!