ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟಿಲ್ ಅಂತ್ಯಕ್ರಿಯೆ ವಿಚಾರದಲ್ಲಿ ಸಂಬಂಧಿಕರ ಮಧ್ಯೆಯೇ ಕೈ ಕೈ ಮಿಲಾಯಿಸುವ ಹಂತಕ್ಕೆ ವಾಗ್ವಾದ ನಡೆದಿದೆ. ಈ ಘಟನೆ ಬೆಳಗಾವಿ ಜಿಲ್ಲೆಯ ಬಡಸ ಗ್ರಾಮದಲ್ಲಿ ಸಂಭವಿಸಿದ್ದು, ಸಂತೋಷ್ ಮೃತದೇಹವನ್ನು ಬೆಳಗಾವಿಯಲ್ಲಿರುವ ಅವರ ಮನೆ ಮುಂದೆ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಂತೋಷ್ ಪಾಟೀಲ್ ಅವರ ಮೃತದೇಹದ ದರ್ಶನ ಪಡೆಯಲು ಬಂದಿದ್ದರು. ಈ ವೇಳೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ ಸಂತೋಷ್ ಆತ್ಮಹತ್ಯೆಗೆ ನ್ಯಾಯ ಸಿಗಬೇಕು. ಜೊತೆಗೆ ಪರಿಹಾರ ಸಿಗಬೇಕು. ಅಲ್ಲಿಯವರೆಗೂ ಸಂತೋಷ್ ಅವರ ಮೃತದೇಹವನ್ನು ಕದಿಲುಸುವುದು ಬೇಡಾ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಂತೋಷ್ ಸಂಬಂಧಿಗಳು ಅಂತ್ಯಕ್ರಿಯೆ ಮಾಡೋಣ. ಸಂತೋಷ್ ಮೃತದೇಹ ಇಟ್ಟು ಪ್ರತಿಭಟನೆ ಮಾಡುವುದು ಬೇಡ ಎಂದಿದ್ದರು. ಆ ಬಳಿಕ ಸಂತೋಷ್ ಪಾಟೀಲ್ ಸಂಬಂಧೀಕರ ಮಧ್ಯೆಯೇ ಕೈ ಕೈ ಮಿಲಾಯಿಸುವ ಹಂತಕ್ಕೆ ವಾಗ್ವಾದ ನಡೆದಿದೆ. ಕೂಡಲೇ ಅಲ್ಲಿದ್ದ ಗ್ರಾಮಸ್ಥರು ಮಧ್ಯಸ್ಥಿಕೆ ವಹಿಸಿ ಇಬ್ಬರನ್ನೂ ಶಾಂತ ಪಡಿಸಿದರು.
ಬೆಳಗಾವಿ ತಾಲೂಕಿನ ಬಡಸ ಗ್ರಾಮದ ಮನೆಯಿಂದ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಸಂತೋಷ್ ಪಾಟೀಲ್ ಅವರ ಮೃತದೇಹ ರವಾನೆ ಆಗಿದೆ. ಗ್ರಾಮದ ಹೊರ ವಲಯದ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಗ್ರಾಮದ ಪ್ರಮುಖ ರಸ್ತೆಯಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಲಿದ್ದು, ಲಿಂಗಾಯತ ವಿಧಿ ವಿಧಾನದಂತೆ ನೆರವೇರಲಿರುವ ಸಂತೋಷ ಪಾಟೀಲ್ ಅಂತ್ಯಕ್ರಿಯೆ ನಡೆಯಲಿದೆ.