ಕೂಗು ನಿಮ್ಮದು ಧ್ವನಿ ನಮ್ಮದು

ಲಕ್ಷ್ಮೀ ಹೆಬ್ಬಾಳಕರ್: ಎಲ್ಲ ಎಲ್ಲೆಗಳ ಮೀರಿ ಬೆಳೆಯುತ್ತಿರುವ ಸಮಷ್ಠಿ ಭಾವದ ನಾಯಕಿ

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಎಲ್ಲದರಲ್ಲೂ ರಾಜಕೀಯ ಸೇರಿಕೊಳ್ಳುತ್ತಿರುವುದರಿಂದ ಪಕ್ಷಾತೀತವಾಗಿ ಒಪ್ಪಿಕೊಳ್ಳುವಂತಹ ವ್ಯಕ್ತಿ ಇಲ್ಲವೆಂದೇ ಹೇಳಬಹುದು. ಅದರಲ್ಲೂ ರಾಜಕೀದಲ್ಲಿದ್ದು ಎಲ್ಲರೊಂದಿಗೆ ಸೌಹಾರ್ದ ಸಂಬಂಧ ಹೊಂದಿರುವವರಂತೂ ಅಪರೂಪದಲ್ಲಿ ಅಪರೂಪ.

ನೂರಕ್ಕೆ ನೂರರಷ್ಟು ಎಲ್ಲರೂ ಒಪ್ಪತಕ್ಕ ನಾಯಕರು ಸಿಗಲು ಸಾಧ್ಯವೇ ಇಲ್ಲ. ಕೊನೆಗೆ ರಾಜಕಾರಣಕ್ಕಾದರೂ ವಿರೋಧಿಸುವ ಜಾಯಮಾನ ಎಲ್ಲೆಡೆ ಕಾಣುತ್ತದೆ. ಅದರಲ್ಲೂ ಅಧಿಕಾರದ ಮೆಟ್ಟಿಲು ಏರುತ್ತ ಹೋದಂತೆ ವಿರೋಧಿಗಳ ಸಂಖ್ಯೆಯೂ ಹೆಚ್ಚುತ್ತಲೇ ಹೊಗುತ್ತದೆ. ಸಂಪೂರ್ಣವಾಗಿ ವಿರೋಧಾತೀತವಾಗಿ ಬೆಳೆಯುವುದು ಸಾಧ್ಯವೂ ಇಲ್ಲ, ಅದು ಒಂದು ದೃಷ್ಟಿಯಿಂದ ಸಾಧುವೂ ಅಲ್ಲ. ವಿರೋಧಿಗಳಿದ್ದಾಗಲೇ ನಾವು ತಪ್ಪುಗಳನ್ನು ತಿದ್ದಿಕೊಳ್ಳುತ್ತ ಎತ್ತರಕ್ಕೆ ಬೆಳೆಯಲು ಸಾಧ್ಯ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯವನ್ನು ಹೊರಗಿಟ್ಟು ನೋಡುವುದಾದಲ್ಲಿ ಅತ್ಯಂತ ವೇಗವಾಗಿ ಮತ್ತು ಪಕ್ಷ, ಜಾತಿ, ಗಡಿಗಳ ಎಲ್ಲೆ ಮೀರಿ ಬೆಳೆಯುತ್ತಿರುವ ಅಪರೂಪದ ನಾಯಕಿ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳಕರ್.

ಇದರರ್ಥ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ವಿರೋಧಿಗಳಿಲ್ಲ ಎಂದಲ್ಲ, ಅವರಿಗೆ ಹೆಜ್ಜೆ ಹೆಜ್ಜೆಗೂ ವಿರೋಧಿಗಳಿದ್ದಾರೆ. ಒಬ್ಬ ರಾಜಕಾರಣಿಯಾಗಿ ಅವರಿಗೆ ಬೇಕಾದಷ್ಟು ವಿರೋಧಿಗಳಿದ್ದಾರೆ. ಆದರೆ ಅವರ ನಡೆ, ಚಾಣಾಕ್ಷತನ, ಅಭಿವೃದ್ಧಿ ವಿಷಯ, ಎಲ್ಲರೊಂದಿಗಿನ ಸಂಬಂಧಗಳನ್ನು ನೋಡಿದಾಗ ಪಕ್ಷಾತೀತವಾಗಿ, ಜಾತ್ಯತೀತವಾಗಿ, ಗಡಿ ಮೀರಿ ಎಲ್ಲರೂ ನೆಚ್ಚಿಕೊಳ್ಳುತ್ತಾರೆ, ಪ್ರಶಂಸೆ ವ್ಯಕ್ತಪಡಿಸುತ್ತಾರೆ.

ಲಕ್ಷ್ಮಿ ಹೆಬ್ಬಾಳಕರ್ ಏಕಾ ಏಕಿ ಬೆಳೆದು ನಿಂತ ನಾಯಕಿಯಲ್ಲ. ನಾಯಕತ್ವ ಬೆಳೆಸಿಕೊಂಡಿರುವುದರ ಹಿಂದೆ ಸಾಕಷ್ಟು ಶ್ರಮವಿದೆ, ಹಿಡಿದ ಕೆಲಸ ಬಿಡದೆ ಸಾಧಿಸುವ ಛಲ ಅವರಲ್ಲಿದೆ. ಎಲ್ಲರನ್ನೂ ವಿಶ್ಲಾಸಕ್ಕೆ ತೆಗೆದುಕೊಂಡು ಹೋಗುವ ಗುಣವಿದೆ. ತಮಗೆ ಅವಮಾನ ಮಾಡಿದವರಿಗೆ ಸಾಧನೆಯ ಮೂಲಕ ಉತ್ತರಿಸುವ ಜಾಣ್ಮೆ ಇದೆ.

ಅನಗತ್ಯವಾಗಿ ಯಾರ ತಂಟೆಗೂ ಹೋಗದ ಅವರು ತಮ್ಮ ದಾರಿಗೆ ಅಡ್ಡ ಬರುವವರನ್ನು ಸುಮ್ಮನೆ ಬಿಡುವ ಜಾಯಮಾನದವರಲ್ಲ. ತಂಟೆ ಬಂದವರು ಮತ್ತೆ ಮೇಳೆದಂತೆ, ತಮ್ಮ ಕಡೆಗೆ ತಲೆ ಹಾಕಿಯೂ ಮಲಗದಂತೆ ಏಟು ಕೊಡುವ ತಾಕತ್ತಿದೆ. ಬಿಚ್ಚಿಡುತ್ತೇನೆಂದವರೆಲ್ಲ ಮುಚ್ಚಿಕೊಂಡು ಹೋಗುವಂತೆ ಮಾಡುವ ದಿಟ್ಟತನ ಅವರಲ್ಲಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ ಸಂದರ್ಭದಲ್ಲಿ ಹತಾಶರಾಗದೆ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹೊತ್ತುಕೊಂಡು ಮುನ್ನಡೆಸಿದವರು, ನೆಲಬಡಿದು ಮತ್ತೆ ಮೇಲೇಳುವಂತೆ ಮಾಡಿದವರು ಲಕ್ಷ್ಮಿ ಹೆಬ್ಬಾಳಕರ್. ಮಹಿಳೆಯೊಬ್ಬಳು ಬೆಳೆದು ನಿಂತಲ್ಲಿ ತಮ್ಮ ಅಸ್ಥಿತ್ವಕ್ಕೆಲ್ಲಿ ದಕ್ಕೆ ಬಂದು ಬಿಡುತ್ತೋ ಎನ್ನುವಂತಹ ಮನೋಭಾವದ ನಾಯಕರ ಮಧ್ಯೆಯೂ ಪಕ್ಷವನ್ನು ಕಟ್ಟಿ, ಗಟ್ಟಿಗೊಳಿಸಿದವರು ಅವರು. ಬಿಜೆಪಿ ಪ್ರಬಲವಾಗಿರುವ ಜಿಲ್ಲೆಯಲ್ಲಿ ಒನ್ ವುಮೆನ್ ಆರ್ಮಿಯಂತೆ ನಿಂತು ಕಾಂಗ್ರೆಸ್ ಧೂಳು ಕೊಡವಿ ಮೇಲೇಳುವಂತೆ ಮಾಡಿದರು. ಬೆಂಗಳೂರು ಬಿಟ್ಟರೆ ಬೆಳಗಾವಿಯೇ ಕಾಂಗ್ರೆಸ್ ಪಕ್ಷಕ್ಕೆ ಎರಡನೇ ರಾಜಧಾನಿ ಎನ್ನುವ ರೀತಿಯಲ್ಲಿ ಬೆಳೆಸಿದರು.

ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ, ಮಹಿಳಾ ಕಾಂಗ್ರೆಸ್ ಎಂದರೆ ಮೂಗು ಮುರಿಯುವ ಸನ್ನಿವೇಶದಲ್ಲೂ ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಘಟಕವನ್ನು ಹೇಗೆ ಕಟ್ಟಿ ಬೆಳೆಸಬಹುದು ಎಂದು ತೋರಿಸಿದರು.

ಚುನಾವಣೆಯಲ್ಲಿ ಆಯ್ಕೆಯಾದ ನಂತರದಲ್ಲಿ ರಾಜಕೀಯವನ್ನೆಲ್ಲ ಬದಿಗಿಟ್ಟು ತಾವು ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮಾದರಿಯಾಗಿ ಕೆಲಸ ಮಾಡಿ ತೋರಿಸುತ್ತಿದ್ದಾರೆ ಲಕ್ಷ್ಮೀ ಹೆಬ್ಬಾಳಕರ್. ವಿರೋಧಿಗಳ ಬಗ್ಗೆ, ಅನಗತ್ಯ ರಾಜಕೀಯ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವಾಹ, ಕೊರೋನಾದತಂಹ ಪ್ರಕೃತಿ ವಿಕೋಪಗಳ ಅಟ್ಟಹಾಸದ ಮಧ್ಯೆಯೂ ಎದೆಗುಂದದೆ, ರಾಜ್ಯದಲ್ಲಿ ಯಾವ ಪಕ್ಷದ ಆಡಳಿತವಿದ್ದರೂ ಇಲ್ಲದ ನೆಪ ಹೇಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾವಿರಾರು ಕೋಟಿ ರೂಗಳ ಕೆಲಸವನ್ನು ತಂದು ಕ್ಷೇತ್ರದ ಮನೆಯ ಮಗಳಾಗಿ ಪ್ರೀತಿ ಗಳಿಸಿದರು.

ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಸಹೋದರ ಚನ್ನರಾಜ ಹಟ್ಟಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಹಿಂದೆ ಮುಂದೆ ನೋಡದೆ ಅರ್ಜುನನ ಬಾಣದ ಗುರಿ ಪಕ್ಷಿಯ ಕಣ್ಣಿನಲ್ಲಿ ನೆಟ್ಟಂತೆ ಕಾಂಗ್ರೆಸ್ ಅಭ್ಯರ್ಥಿಯ ಗೆಲವೊಂದೇ ತಮ್ಮ ಗುರಿ ಎಂದು ಹಗಲು, ರಾತ್ರಿ ಶಕ್ತಿ, ಯುಕ್ತಿಯನ್ನು ಬಳಸಿಕೊಂಡು ಸಾಧಿಸಿ ತೋರಿಸಿದರು. ಸವಾಲೆಸೆದವರಿಗೆಲ್ಲ ಮಣ್ಣು ಮುಕ್ಕಿಸಿದರು. ತನ್ಮೂಲಕ ಅಭಿವೃದ್ಧಿ ಕೆಲಸಗಳಿಗೆ ತಮ್ಮ 2 ಕೈಗಳಿಗೆ ಮತ್ತೆರಡು ಕೈಗಳನ್ನು ಸೆರಿಸಿಕೊಂಡರು.

ಲಕ್ಷ್ಮೀ ಹೆಬ್ಬಾಳಕರ್ ರಾಜ್ಯದಲ್ಲಿ ಲಿಂಗಾಯತ ನಾಯಕಿಯಾಗಿ ಬೆಳೆದಿದ್ದಾರೆ. ಹಾಗಂತ ತೀರಾ ಜಾತೀಯವಾದಿಯಾಗದೆ, ಸರ್ವ ಜನಾಂಗದ ಪ್ರೀತಿಯನ್ನೂ ಗಳಿಸಿಕೊಂಡಿದ್ದಾರೆ. ಹಲವು ಮಠಾಧೀಿಶರ ಒಲವು ಬಿಜೆಪಿ ಕಡೆಗಿದ್ದರೂ ಲಕ್ಷ್ಮೀ ಹೆಬ್ಬಾಳಕರ್ ವಿಷಯ ಬಂದಾಗ ಅವೆಲ್ಲ ಗೌಣವಾಗುತ್ತವೆ. ಅವರು ನಮ್ಮವರು ಎನ್ನುವ ಮನೋಭಾವ ಮೂಡುವಂತೆ ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಕೇವಲ ರಾಜಕೀಯವಾಗಿ ಮಾತ್ರ ಬೆಳೆದು ನಿಂತಿಲ್ಲ. ಅವರು ರಾಜಕೀಯಕ್ಕಿಂತ ಹೆಚ್ಚಾಗಿ ಸಾಮಾಜಿಕ ಮುಂದಾಳುವಾಗಿದ್ದಾರೆ. ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. 2 ಸಕ್ಕರೆ ಕಾರ್ಖಾನೆಗಳನ್ನು ಕಟ್ಟಿ ನಿಲ್ಲಿಸಿದ್ದಾರೆ. ರಿಯಲ್ ಎಸ್ಟೇಟ್ ನಲ್ಲೂ ಛಾಪು ಮೂಡಿಸಿದ್ದಾರೆ. ಸಹಕಾರಿ ಸಂಘ ಕಟ್ಟಿ ಬೆಳೆಸುತ್ತಿದ್ದಾರೆ. ಕ್ಷೇತ್ರದ ಜನರ ಆರೋಗ್ಯಕ್ಕೆ ಬೆಂಬಲವಾಗಿ ನಿಲ್ಲಲು ಆಸ್ಪತ್ರೆಯೊದನ್ನು ಕಟ್ಟುವ ಬೃಹತ್ ಯೋಜನೆಯನ್ನು ರೂಪಿಸಿದ್ದಾರೆ.


ಎಲ್ಲರೊಂದಿಗೆ ಅವಿನಾಭಾವ ಸಂಬಂಧ

ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಸ್ವಂತ ಕುಟುಂಬದ ಸದಸ್ಯರಿಂದ ಹಿಡಿದು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಎಲ್ಲ ನಾಯಕರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ, ಎಲ್ಲರ ಪ್ರೀತಿ ಗಳಿಸಿಕೊಂಡಿದ್ದಾರೆ.

ಸಹೋದರ ಚನ್ನರಾಜ ಹೊಟ್ಟಿಹೊಳಿ ಎಂಜಿನಿಯರಿಂಗ್ ಪದವೀಧರರಾಗಿದ್ದು, ವಿದೇಶದಲ್ಲಿ ಉದ್ಯೋಗ ಸಿಕ್ಕಿದ್ದರೂ ಅಕ್ಕನೊಂದಿಗೆ ರಾಜಕೀಯ, ಸಾಮಾಜಿಕ ಹಾಗೂ ಔದ್ಯಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಮರಳಿ ಆಗಮಿಸಿದರು. ಲಕ್ಷ್ಮಿ ಹೆಬ್ಬಾಳಕರ್ ಅವರ ಎಲ್ಲ ಕೆಲಸಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದು, ಅಭಿವೃದ್ಧಿ ಕೆಲಸಗಳಿಗೆ ಇನ್ನಷ್ಟು ಬಲ ನೀಡಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ್ ಅವರ ಪುತ್ರ ಮೃಣಾಲ ಹೆಬ್ಬಾಳಕರ್ ಕೂಡ ಸಂಪೂರ್ಣವಾಗಿ ರಾಜಕೀಯ, ಸಾಮಾಜಿಕ ಹಾಗೂ ಔದ್ಯಮಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಮತ್ತಷ್ಟು ಬಲ ನೀಡಿದ್ದಾರೆ. ಇಡೀ ಕುಟುಂಬ ಸಕ್ಕರೆ ಕಾರ್ಖಾನೆಗಳನ್ನು, ಸಹಕಾರ ಸಂಘವನ್ನು, ರಿಯಲ್ ಎಸ್ಟೇಟ್ ಉದ್ಯಮಗಳನ್ನು ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಯಶಸ್ವಿ ಉದ್ಯಮಿಯಾಗಿ ಮುನ್ನಡೆಯುತ್ತಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ್ ಅವರು ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಾರೆ. ಎಲ್ಲರ ಸಹಕಾರದಿಂದ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ, ಪಕ್ಷಾತೀತವಾಗಿ ಜಿಲ್ಲೆಯ ಉಳಿದ ನಾಯಕರು, ಮಠಾಧೀಶರು ಸಹ ಲಕ್ಷ್ಮಿ ಹೆಬ್ಬಾಳಕರ್ ಅವರ ಸಾಧನೆ ಹಾಗೂ ಸಮಾಜಕ್ಕೆ ಅವರು ನೀಡುತ್ತಿರುವ ಕೊಡುಗೆಗೆ ಮೆಚ್ಚಿ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದಾರೆ. ಹಾಗಾಗಿ ಮುಂಚೂಣಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ್ ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಮಹಿಳಾ ಕಾಂಗ್ರೆಸ್ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಿದಂತೆ ರಾಜ್ಯಮಟ್ಟದ ಎಲ್ಲ ಪಕ್ಷಗಳ ನಾಯಕರೊಂದಿಗೆ ಲಕ್ಷ್ಮಿ ಹೆಬ್ಬಾಳಕರ್ ಸೌಹಾರ್ದ ಸಂಬಂಧವನ್ನು ಹೊಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ, ಜಿಲ್ಲೆಯ ಅಭಿವೃದ್ಧಿ, ಸಮಾಜದ ಅಭಿವೃದ್ಧಿಗೆ ಈ ಸಂಬಂಧವನ್ನು ಸಮರ್ಪಕವಾಗಿ ಬಳಸಿಕೊಡಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ್ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನ ಅತ್ಯುನ್ನತ ನಾಯಕರ ಜೊತೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದಾರೆ. ಸೋನಿಯಾ ಗಾಂಧಿ ಕುಟುಂಬದೊಂದಿಗೂ ನಿಕಟ ಸಂಬಂಧ ಹೊಂದಿದ್ದು, ರಾಷ್ಟ್ರ ಮಟ್ಟದಲ್ಲಿ ಸಹ ಪಕ್ಷ ಸಂಘಟನೆಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ನಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಪ್ರಮುಖ ಸ್ಥಾನವಿದೆ.

ಒಟ್ಟಾರೆ ಲಕ್ಷ್ಮಿ ಹೆಬ್ಬಾಳಕರ್ ಅವರು ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯುತ್ತಿದ್ದು, ಅವರ ದೂರದೃಷ್ಟಿ, ಸಾಮಾಜಿಕ, ರಾಜಕೀಯ, ಔದ್ಯಮಿಕ ಕೆಲಸಗಳಿಗೆ ಪಕ್ಷಾತೀತವಾಗಿ ಬೆಂಬಲ ನೀಡುವ ಅಗತ್ಯವಿದೆ.

ಲಕ್ಷ್ಮಿ ಹೆಬ್ಬಾಳಕರ್ ಒಬ್ಬ ಹೆಣ್ಣು ಮಗಳಾಗಿ ಮಾಡುತ್ತಿರುವ ಸಾಧನೆ ನಿಜಕ್ಕೂ ಮೆಚ್ಚಲೇಬೇಕು. ರಾಜಕೀಯಕ್ಕಾಗಿ ಏನಾದರೂ ಮಾತನಾಡಬಹುದು, ಆದರೆ ಅವರ ಧೈರ್ಯ, ಸಾಹಸ ಮೆಚ್ಚಲೇಬೇಕು ಎಂದು ಅಂದಿನ ಕೇಂದ್ರ ಸಚಿವ ಸುರೇಶ ಅಂಗಡಿ ಬಹಿರಂಗವಾಗಿಯೇ ಹೇಳುತ್ತಿದ್ದರು.

ಲಕ್ಷ್ಮಿ ಹೆಬ್ಬಾಳಕರ್ ಅವರು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ರಾಜ್ಯಕ್ಕೇ ಮಾದರಿಯಾಗಿದ್ದಾರೆ. ಈ ಭಾಗದಲ್ಲಿ ಅವರು ಕಿತ್ತೂರು ರಾಣಿ ಚನ್ನಮ್ಮ ಎಂದು ಕರೆಸಿಕೊಂಡಿದ್ದಾರೆ. ಸಮಾಜಕ್ಕೆ ಅವರು ಆದರ್ಶರಾಗಿದ್ದಾರೆ.

-ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ( ಏಪ್ರಿಲ್ 28,2022ರಂದು ಅರಳಿಕಟ್ಟಿ ಕಾರ್ಯಕ್ರಮದಲ್ಲಿ)

ಲಕ್ಷ್ಮಿಯಲ್ಲ, ಚನ್ನಮ್ಮ ಎನ್ನಬೇಕು

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹುಟ್ಟು ಹೋರಾಟಗಾರ್ತಿ. ಅವರಿಗೆ ಲಕ್ಷ್ಮಿ ಬದಲಿಗೆ ಚನ್ನಮ್ಮ ಎಂದು ಹೆಸರಿಡಬೇಕು.

  • ಡಾ.ಪ್ರಭಾಕರ ಕೋರೆ, ಬಿಜೆಪಿಯ ಹಿರಿಯ ನಾಯಕ ರಾಜ್ಯಸಭೆಯ ಮಾಜಿ ಸದಸ್ಯ ( ಏ.12, 2022ರಂದು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ)
error: Content is protected !!