ಕೂಗು ನಿಮ್ಮದು ಧ್ವನಿ ನಮ್ಮದು

ರಸ್ತೆ ಗುಂಡಿ ಆಯಿತು, ಇವಾಗ ಪಾರ್ಕ್ ಹೊಂಡಕ್ಕೆ ಬಾಲಕ ಬಲಿ.

ಬೆಂಗಳೂರು/ನೆಲಮಂಗಲ: ರಸ್ತೆ ಗುಂಡಿ ಆಯಿತು, ಇದೀಗ ಪಾರ್ಕ್ ಹೊಂಡಕ್ಕೆ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಮಲ್ಲಸಂದ್ರ ವಾರ್ಡಿನ ಪಾರ್ಕ್‍ನಲ್ಲಿ ಶುಕ್ರವಾರ ಸಂಭವಿಸಿದೆ. ಪ್ರತಾಪ್ ೮ ಮೃತ ದುರ್ದೈವಿ ಬಾಲಕ. ಈತ ರುದ್ರಮುನಿ ಮತ್ತು ಕಾಂತಮ್ಮರ ೨ ಮಗ. ಆಟವಾಡುವ ವೇಳೆ BBMP ವತಿಯಿಂದ ನಿರ್ಮಾಣವಾಗಿದ್ದ ಕೆಂಪೇಗೌಡ ಉದ್ಯಾನವನದ ಪಾರ್ಕ್‍ನಲ್ಲಿರುವ ಹೊಂಡಕ್ಕೆ ಬಿದ್ದಿದ್ದಾನೆ.

ಮೂಲತಃ ಹಾಸನ ಜಿಲ್ಲೆಯವರಾದ ರುದ್ರಮುನಿ ಕುಟುಂಬ ಕಳೆದ ಇಪ್ಪತೈದು ವರ್ಷಗಳಿಂದ ಮಲ್ಲಸಂದ್ರದಲ್ಲಿ ವಾಸವಾಗಿದೆ. ನಿನ್ನೆ ಆಟವಾಡಲು ಹೋಗಿದ್ದ ಮಗ ಮಧ್ಯಾಹ್ನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾನೆ. ತಮ್ಮನನ್ನು ರಕ್ಷಣೆ ಮಾಡಲು ಅಣ್ಣ ರವಿತೇಜಾ ಮುಂದಾಗಿದ್ದು, ಆತನು ಸಹ ಹೊಂಡಕ್ಕೆ ಬಿದ್ದಿದ್ದಾನೆ. ಇದನ್ನು ಗಮನಸಿದ ಸ್ಥಳೀಯರು ಕೂಡಲೇ ರವಿತೇಜಾನನ್ನ ಕಾಪಾಡಿದ್ದಾರೆ. ಆದ್ರೆ ತಮ್ಮ ಪ್ರತಾಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸದ್ಯ ಬಾಲಕನ ಮೃತದೇಹ ಸಪ್ತಗಿರಿ ಆಸ್ಪತ್ರೆಯಲ್ಲಿದ್ದು, ಹಾಸ್ಪಿಟಲ್ ಮುಂದೆ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಶಾಸಕರಾದ ಶ್ರೀ ಆರ್ ಮಂಜುನಾಥ್ ಮಗುವಿನ ಕುಟುಂಬಕ್ಕೆ ಐವತ್ತು ಸಾವಿರ ರೂಪಾಯಿ ಧನಸಹಾಯ ಮಾಡಿದ್ದಾರೆ. ಕುಟುಂಬಕ್ಕೆ ಸರ್ಕಾರದಿಂದ ಮನೆ ಮಂಜೂರು ಮಾಡಿಸುವುದಾಗಿಯು ಈ ಸಂದರ್ಭದಲ್ಲಿ ಮಂಜುನಾಥ ತಿಳಿಸಿದ್ರು. ಈ ಸಂಬಂಧ ಬಾಗಲಗುಂಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!