ಕೂಗು ನಿಮ್ಮದು ಧ್ವನಿ ನಮ್ಮದು

ಸರಿ ನನ್ನ ರಿಮೋಟ್ ಬೇರೆಯವರ ಕೈಯಲ್ಲಿದೆ ಒಪ್ಪಿಕೊಳ್ತೀನಿ, ಹಾಗಾದ್ರೆ ನಡ್ಡಾ ರಿಮೋಟ್ ಯಾರ ಕೈಯಲ್ಲಿದೆ?: ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿಯವರ ರಿಮೋಟ್ ಕಂಟ್ರೋಲ್ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ನನ್ನ ರಿಮೋಟ್ ಬೇರೆಯವರ ಕೈಲಿದೆ ಒಪ್ಪಿಕೊಳ್ಳುತ್ತೇನೆ ಹಾಗಾದ್ರೆ ನಡ್ಡಾ ಅವರ ರಿಮೋಟ್ ಯಾರ ಕೈಲಿದೆ ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಸತ್ಯವನ್ನು ಮಾತನಾಡುವುದಕ್ಕಾಗಿ ಬಿಜೆಪಿಯು ಅವರಿಗೆ ಕಿರುಕುಳ ನೀಡುತ್ತಿದೆ ಅಂತಹ ವಿಷಯಗಳಿಗೆ ನಾವು ಹೆದರುವುದಿಲ್ಲ ಎಲ್ಲಕ್ಕೂ ಸಿದ್ಧ ಎಂದರು. ಮೋದಿಯವರು ಬೆಳಗಾವಿಗೆ ಬಂದಿದ್ದಾಗ ಮಲ್ಲಿಕಾರ್ಜುನ ಖರ್ಗೆ ಅವರ ರಿಮೋಟ್ ಕಂಟ್ರೋಲ್ ಬೇರೆಯವರ ಬಳಿ ಇದೆ ಎಂದು ಹೇಳಿದ್ದರು ಅದಕ್ಕೆ ತಿರುಗೇಟು ನೀಡಿರುವ ಖರ್ಗೆ ಸರಿ ನನ್ನ ರಿಮೋಟ್ ಕಂಟ್ರೋಲ್ ಬೇರೆಯವರ ಬಳಿ ಇದೆ ಆದರೆ ನಡ್ಡಾ ಅವರ ರಿಮೋಟ್ ಕಂಟ್ರೋಲ್ ಎಲ್ಲಿದೆ ಎಂದು ಪ್ರಶ್ನಿಸಿದ್ದರು.

ಇದು ಪ್ರಜಾಪ್ರಭುತ್ವ ರಾಷ್ಟ್ರ ಈ ದೇಶದಲ್ಲಿ ಪ್ರಜಾಪ್ರಭುತ್ವ ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳುವುದರಲ್ಲಿ ತಪ್ಪೇನಿದೆ’ ಎಂದು ಖರ್ಗೆ ಹೇಳಿದರು. ಈ ದೇಶದಲ್ಲಿ ಇನ್ನೂ ಜಾತೀಯತೆ ಇದೆ.ನಮಗೆ ಸತ್ಯವನ್ನು ಮಾತನಾಡಲು ಬಿಡುವುದಿಲ್ಲ ಎಂದಿದ್ದಾರೆ. ನಿಮ್ಮ ಇಡಿ, ಸಿಬಿಐ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ, ನಾವು ಅವರಿಗೆ ಹೆದರುವುದಿಲ್ಲ. ರಾಹುಲ್ ಗಾಂಧಿ ಎಂದಿಗೂ ಹೆದರುವುದಿಲ್ಲ, ಅವರು ಸತ್ಯವನ್ನು ಮಾತನಾಡುತ್ತಾರೆ ಮತ್ತು ಅಂತಹ ವ್ಯಕ್ತಿಗೆ ತೊಂದರೆಯಾಗುತ್ತಿದೆ. ಜೈಲಿಗೆ ಕಳುಹಿಸಿದರೂ ಹೋಗಲು ಸಿದ್ಧರಿದ್ದೇವೆ ಎಂದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಷ್ಟ್ರವ್ಯಾಪಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿಯವರು ರೈತರು, ಯುವಕರು, ಮಹಿಳೆಯರು ಮತ್ತು ಸಮಾಜದ ಪ್ರತಿಯೊಂದು ಸ್ತರದ ಜನರನ್ನು ಭೇಟಿಯಾದರು

error: Content is protected !!