ಕೇರಳ; ಮನೆಯವರನ್ನ ಧಿಕ್ಕರಿಸಿ ಪ್ರೀತಿಸಿದವನನ್ನು ಮದುವೆಯಾದ ನಂತರ ಗಂಡನೇ ಶತ್ರುವಾದ. ಪುಟ್ಟ ಮಗುವಿನೊಂದಿಗೆ ಪತ್ನಿಯನ್ನು ಗಂಡ ಹೊರಹಾಕಿದ. ಆಗ ಈಕೆಗೆ 18 ವರ್ಷ. ಅಂದು ಜೀವನ ನಿರ್ವಹಣೆಗೆ ಷರಭತ್ತು, ಐಸ್‌ಕ್ರೀಂ ಮಾರಿದ್ದ ಅದೇ ಯುವತಿ ಈಗ ಕೇರಳದ ತಿರುವನಂತಪುರ ಜಿಲ್ಲೆಯ ವರ್ಕಳದಲ್ಲಿ ಸಬ್ ಇನ್ಸ್‌ಪೆಕ್ಟರ್ “ಆ್ಯನಿ ಸಿವಾ”.
ಇಡೀ ಕೇರಳ ಜನರೇ ಕೊಂಡಾಡ್ತಿದ್ದಾರೆ. ಮಡಿಲಲ್ಲಿ ಹಾಲುಗಲ್ಲದ ಕಂದನಿಟ್ಟುಕೊಂಡು ನೂರೆಂಟು ಸವಾಲುಗಳನ್ನ ಮೆಟ್ಟು ನಿಂತ ಈ ಲೇಡಿ ಆಫೀಸರ್ ಬೆಳೆದು ಬಂದ ಕಥೆಯೇ ರೋಚಕ. ಗಂಡ ನಡುಬೀದಿಯಲ್ಲಿ ಕೈ ಕೊಟ್ಟಾಗ ಆ್ಯನಿ ಸಿವಾ ಧೃತಿಗೆಡಲಿಲ್ಲ. ಅಜ್ಜಿಯ ಮನೆಯಲ್ಲಿ ಉಳಿದು ಶಿವಗಿರಿ ಆಶ್ರಮದಲ್ಲಿ ಅಂಗಡಿ ತೆರೆದು ಷರಬತ್ತು, ಐಸ್‌ಕ್ರೀಮ್ ಮಾರಿ ಬದುಕು ಸಾಗಿಸಿದ್ದಾರೆ.
ಈ ನಡುವೆ ಹೃದಯವಂತರೊಬ್ರು ಆ್ಯನಿ ಸಿವಾಗೆ ಆರ್ಥಿಕ ಸಹಾಯ ಮಾಡಿದ್ರು. ಅಂದು ಗುರಿಯಿಟ್ಟು ಮುನ್ನುಗ್ಗಿದ್ದ ಆ್ಯನಿ ಸಿವಾ ಪೊಲೀಸ್ ಪರೀಕ್ಷೆ ಪಾಸ್ ಆಗಿ ಎಸ್ಐ ಆಗಿದ್ದಾರೆ. 18 ವರ್ಷದ ಹಿಂದೆ ಯಾವ ಪೊಲೀಸ್ ಠಾಣೆ ಎದುರು ಆ್ಯನಿ ಸಿವಾ ದಿಕ್ಕು ತೋಚದೆ, ಏಕಾಂಗಿಯಾಗಿ ನಿಂತಿದ್ದಳೋ. ಈಗ ಅದೇ ಠಾಣೆಯಲ್ಲಿ ಆಕೆಗೆ ಸೆಲ್ಯೂಟ್ ಅಂತಿದ್ದಾರೆ. ಖ್ಯಾತ ನಟ ಮೋಹನ್ ಲಾಲ್ ಸೇರಿದಂತೆ ರಾಜಕಾರಣಿಗಳೂ ಈಕೆಯ ಸಾಧನೆಯನ್ನ ಕೊಂಡಾಡಿದ್ದಾರೆ.
ಆ್ಯನಿ ಸಿವಾಗೆ ಈಗ 30 ವರ್ಷ. ಮಗನನ್ನ ಮಡಿಲಲ್ಲಿ ಹಿಡಿದು 12 ವರ್ಷ ಸಾಗಿ ಬಂದ ಸಾಧನೆಯ ಹಾದಿ ಎಲ್ಲರಿಗೂ ಸ್ಪೂರ್ತಿ ನೀಡುವಂತಿದೆ. ಸಾಧಿಸಬೇಕೆಂದು ಛಲದಿಂದ ಹೆಜ್ಜೆ ಇಟ್ಟರೆ ಎಲ್ಲವೂ ಸಾಧ್ಯ ಎಂಬುದಕ್ಕೆಈ ಗೃಹಿಣಿಯ ಕತೆ ಪ್ರೇರಣೆಯಾಗುತ್ತೆ.