ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನಲ್ಲಿ ಆಗಾಗ ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿರುವ ಆತಂಕಕಾರಿ ಬೆಳವಣಿಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹದಳ ಕೂಂಬಿಗ್ ಆರಂಭಿಸಿ, ತನಿಖೆ ಕೈಗೊಂಡಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹುಂಡೀಪುರ – ಕೆಬ್ಬೇಪುರ ನಡುವೆ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಬಗ್ಗೆ ಗುರುವಾರ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಕಳೆದ ತಿಂಗಳು ಕೇರಳ ಹಾಗೂ ತಮಿಳುನಾಡಿನ ರಾಜ್ಯದ ಟ್ರೆöÊಜಂಕ್ಷನ್ ಪ್ರದೇಶದಲ್ಲಿ ಸಹಾ ಫೋನ್ ಬಳಕೆಯಾಗಿದ್ದು ನಂತರ ನಕ್ಸಲ್ ಚಲನವಲನಗಳು ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ. ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪೊಲೀಸರು ತಮ್ಮ ಗಡಿಗಳಲ್ಲಿ ಕಟ್ಟೆಚ್ಚರವಹಿಸಿ ಅರಣ್ಯ ಪ್ರದೇಶಗಳಲ್ಲಿ ಕೂಂಬಿAಗ್ ಆರಂಭಿಸಿದ್ದಾರೆ. ಅಲ್ಲದೆ ಬರಗಿಯ ನಕ್ಸಲ್ ನಿಗ್ರಹದಳದ ಸಿಬ್ಬಂದಿ ಕೇರಳ ಗಡಿಯ ಮಾವಿನಹಳ್ಳಿ, ಕಲ್ಕೆರೆ ಮುಂತಾದ ಪ್ರದೇಶಗಳಲ್ಲಿ ತಮಿಳುನಾಡಿನ ಪೊಲೀಸರು ಮಾಯಾರ್ ಕಣಿವೆಯಲ್ಲಿ, ಕೇರಳ ಪೊಲೀಸರು ವೈನಾಡು ಹಾಗೂ ರಾಜ್ಯ ಮಡಕೇರಿ ಗಡಿಗಳಲ್ಲಿ ಕೂಂಬಿAಗ್ ಆರಂಭಿಸಿದ್ದಾರೆ.