ಕೂಗು ನಿಮ್ಮದು ಧ್ವನಿ ನಮ್ಮದು

ಒಂದೇ ದಿನ ಹತ್ತು ಸಿನಿಮಾ ರಿಲೀಸ್! ಕಾಂತಾರಕ್ಕೆ ಟಫ್ ಫೈಟ್

ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಟಾಪ್ನಲ್ಲಿದೆ. ಪೀಕ್ ತಲುಪಿರುವ ಸಿನಿಮಾ ಎದುರು ಎಲ್ಲಾ ಸಿನಿಮಾಗಳೂ ಧೂಳೀಪಟವಾಗಿವೆ. ಬಾಲಿವುಡ್ನ ಟಾಪ್ ಸಿನಿಮಾಗಳು ಕೂಡಾ ಮಕಾಡೆ ಮಲಗಿದ್ದು ಕಾಂತಾರ ಓಟಕ್ಕೆ ಬ್ರೇಕ್ ಕೊಡೋದಕ್ಕೆ ಯಾವ ಸಿನಿಮಾಗೂ ಸಾಧ್ಯವಾಗಿಲ್ಲ. ಇದೀಗ ಅಕ್ಟೋಬರ್ 21ರ ಶುಕ್ರವಾದ ಕನ್ನಡ, ಮಲಯಾಳಂ, ತಮಿಳು ಸೇರಿ ಬೇರೆ ಬೇರೆ ಭಾಷೆಗಳಲ್ಲಿ ಒಟ್ಟು 10 ಸಿನಿಮಾಗಳೂ ರಿಲೀಸ್ ಆಗುತ್ತಿವೆ. ಕನ್ನಡದಲ್ಲಿ ಡಾಲಿಯ ಹೆಡ್ ಬುಷ್ ರಿಲೀಸ್ ಆಗಿದ್ದು ಕಾಂತಾರದ ಈ ವಾರದ ಓಟಕ್ಕೆ ಬ್ರೇಕ್ ಬೀಳುತ್ತಾ ಎನ್ನುತ್ತಿದ್ದಾರೆ ಸಿನಿ ಪ್ರೇಮಿಗಳು. ಟಫ್ ಕಾಂಪಿಟೇಷನ್ ಇದ್ದರೂ ಕಾಂತಾರ ಈವರೆಗೂ ಹೌಸ್ ಫುಲ್ ಪ್ರದರ್ಶನಗಳನ್ನು ಕಂಡಿದೆ. ಹೀಗಿದ್ದರೂ ಈಗ ಒಂದೇ ಸಲಕ್ಕೆ 10ನ ಸಿನಿಮಾ ರಿಲೀಸ್ ಆಗಿದ್ದು ಕಾಂತಾರ ವೇಗ ಸ್ವಲ್ಪ ಕಡಿಮೆಯಾಗಬಹುದೇ ಎನ್ನುವ ಚರ್ಚೆ ಶುರುವಾಗಿದೆ.

ಸ್ಯಾಂಡಲ್ವುಡ್ನಲ್ಲಿ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಹೆಡ್ ಬುಶ್ ರಿಲೀಸ್ ಆಗಿದೆ. ಡಾನ್ ಜಯರಾಜ್ ನಿಜ ಕಥೆಯನ್ನು ಹೆಡ್ ಬುಷ್ ಚಿತ್ರದ ಮೂಲಕ ತೆರೆಮೇಲೆ ತೋರಿಸಲಾಗುತ್ತಿದೆ. ಆದರೆ ಹೆಡ್ ಬುಶ್ ಚಿತ್ರದ ಬುಕ್ಕಿಂಗ್ ನಿರೀಕ್ಷಿತ ಮಟ್ಟದಲ್ಲಿಲ್ಲ. ಕಾಂತಾರ ರಿಲೀಸ್ ಆಗಿ ಈಗಾಗಲೇ ವಾರಗಳು ಕಳೆದರೂ ಬುಕ್ಕಿಂಗ್ ಕಮ್ಮಿಯಾಗಿಲ್ಲ. ಇದಕ್ಕೆ ಹೋಲಿಸಿದರೆ ಹೆಡ್ ಬುಷ್ ಬುಕ್ಕಿಂಗ್ ತೀರಾ ಕಮ್ಮಿ
ತಮಿಳಿನಲ್ಲಿಯೂ ಸಾಲು ಸಾಲು ಸಿನಿಮಾ

ತಮಿಳು ಹಾಗೂ ತೆಲುಗಿನಲ್ಲಿ ಕಾಂತಾರ ಭರ್ಜರಿಯಾಗಿ ರೆಸ್ಪಾನ್ಸ್ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ಸಂದರ್ಭದಲ್ಲಿ ಕಾಲಿವುಡ್ನಲ್ಲಿ ಕಾರ್ತಿ ಅವರ ಸರ್ದಾರ್ ಹಾಗೂ ಶಿವಕಾರ್ತಿಕೇಯನ್ ಅವರ ಪ್ರಿನ್ಸ್ ಸಿನಿಮಾ ರಿಲೀಸ್ ಆಗಿದೆ. ಎರಡೂ ಸಿನಿಮಾ ಬಗ್ಗೆ ಕ್ರೇಜ್ ಇದ್ದು ಕಾಂತಾರಕ್ಕೆ ಸ್ಪರ್ಧೆ ನೀಡಲಿವೆಯಾ ಎನ್ನುವುದನ್ನು ಕಾದು ನೋಡಬೇಕು.

ಮಲಯಾಳಂನಲ್ಲಿ ಮೋಹನ್ ಲಾಲ್ ಅಭಿನಯದ ಮಾನ್ಸ್ಟರ್ ಹಾಗೂ ನಿವಿನ್ ಪೌಲಿ ಅಭಿನಯದ ಪಡವೆಟ್ಟು ಸಿನಿಮಾ ರಿಲೀಸ್ ಆಗಿದೆ. ಮೋಹನ್ ಲಾಲ್ ಕ್ರೇಜ್ಗ ಹೆಚ್ಚಿರುವುದರಿಂದ ಇಲ್ಲಿ ಕಾಂತಾರಕ್ಕೆ ಚಿಕ್ಕ ಹೊಡೆತ ನಿರೀಕ್ಷಿಸಲಾಗಿದೆ. ಕಂಟೆಂಟ್ಗಳ ಮೂಲಕ ಹೈಪ್ ಪಡೆಯೋ ಮಲಯಾಳ ಸಿನಿಮಾ ಅಬ್ಬರದ ಮುಂದೆ ಕಾಂತಾರ ಓಟ ಮುಂದುವರಿಯುತ್ತಾ ಎನ್ನುವುದನ್ನು ಕಾದು ನೋಡಬೇಕು.

error: Content is protected !!