ಕೂಗು ನಿಮ್ಮದು ಧ್ವನಿ ನಮ್ಮದು

ಬಾಲಿವುಡ್ನಲ್ಲಿ ಕಾಂತಾರ ಹವಾ! ದಿನವೂ ಕೋಟಿ ಕೋಟಿ ಕಲೆಕ್ಷನ್

ಕಾಂತಾರ, ಸದ್ಯ ಎಲ್ಲೆಡೆ ಮಾತನಾಡುತ್ತಿವ ಸಿನಿಮಾ. ಎಲ್ಲಿ ಹೋದ್ರೂ ಕಾಂತಾರದ್ದೇ ಸದ್ದು, ಬರೀ ಕರುನಾಡಲ್ಲೇ ಅಲ್ಲ. ದೇಶಾದ್ಯಂತ ಹವಾ ಸೃಷ್ಟಿಸುವ ಕಾಂತಾರ ಬಾಲಿವುಡ್ನಲ್ಲಿ ಹೌಸ್ ಫುಲ್ ಆಗುತ್ತಿದ್ದು, ಕೋಟಿ ಕೋಟಿ ಗಳಿಸುತ್ತಿದೆ. ಕನ್ನಡದಲ್ಲಿ ಕಾಂತಾರ ಸೆಪ್ಟೆಂಬರ್ 30ರಂದು ಬಿಡುಗಡೆ ಆಗಿತ್ತು. ಅಲ್ಲಿಂದ, ಇಲ್ಲಿವರೆಗೂ ತನ್ನ ನಾಗಲೋಟ ಮುಂದುವರಿಸಿದೆ. ಅಕ್ಟೋಬರ್ 14ರಂದು ಬೇರೆ ಬೇರೆ ಭಾಷೆಗಳಿಗೂ ಚಿತ್ರ ಡಬ್ ಆಗಿದೆ. ಹಿಂದಿಯಲ್ಲಿ ಬಿಡುಗಡೆ ಆಗಿರುವ ಕಾಂತಾರವನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ. ಮುಂಬೈನಲ್ಲಿ ಸತತ ಮೂರು ದಿನಗಳಿಂದ ಎಲ್ಲಾ ಶೋಗಳು ಹೌಸ್ ಫುಲ್ ಆಗ್ತಿವೆ. ದಿನವೂ ಕೋಟಿ ಕೋಟಿ ಕಲೆಕ್ಷನ್ ಆಗ್ತಿದೆ. ಹಿಂದಿಯಲ್ಲಿ ಡಬ್ ಆಗಿರುವ ಕಾಂತಾರ ಮೊದಲ ದಿನ ಕಲೆಕ್ಷನ್ 1.27 ಕೋಟಿ ರೂಪಾಯಿ.

ಎರಡನೇ ದಿನ 2.75 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ನಿನ್ನೆ ಕೂಡ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಎಷ್ಟು ಗಳಿಸಿದೆ ಎಂದು ನಂಬರ್ ಬರಬೇಕು ಅಷ್ಟೆ. ರಾಜ್ಯದಲ್ಲಿ ಕಾಂತಾರ ಚಿತ್ರದ ಅಬ್ಬರ ಮುಂದುವರಿದಿದೆ. ಮೂರನೇ ವಾರ ಕಳೆಯುತ್ತಿದ್ರೂ ಎಲ್ಲಾ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ. 2 ವಾರದ ಶೋಗಳಿಗೆ ಟಿಕೆಟ್ ಬುಕ್ ಆಗಿವೆ ಎಂದು ಹೇಳಲಾಗ್ತಿದೆ. ಪೊನ್ನಿಯಿನ್ ಸೆಲ್ವನ್ ಸಿನಿಮಾದಂತ ಬಿಗ್ ಬಜೆಟ್ ಮೂವಿ ರಿಲೀಸ್ ದಿನವೇ ಕಾಂತಾರ ರಿಲೀಸ್ ಆದರೂ ಕಾಂತಾರ ನಾಗಾಲೋಟ ಮುಂದುವರೆದಿದೆ. ಪ್ರಾದೇಶಿಕ ಚಿತ್ರವಾದರೂ ಬಾಕ್ಸ್ ಆಫೀಸ್ನಲ್ಲಿ ಹಿಂದೆ ಬಿದ್ದಿಲ್ಲ.


ಬಾಲಿವುಡ್ ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದು ಅಪರೂಪಕ್ಕೆ 4 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ. ಎಂತಹಾ ಸಿನಿಮಾವಾದರೂ 3ರಿಂದ ಮೂರೂವರೆ ಸ್ಟಾರ್ ರೇಟಿಂಗ್ ಕೊಡುವ ಅವರು ಕಾಂತಾರಕ್ಕೆ 4 ಸ್ಟಾರ್ ಕೊಟ್ಟಿರುವುದು ಸಿನಿಮಾಗೆ ಉತ್ತಮ ಸ್ಪಂದನೆ ಸಿಕ್ಕಿದೆ.
ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಕಾಂತಾರ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ, ಅಚ್ಯುತ್ ಕುಮಾರ್ ಕಿಶೋರ್, ಸಪ್ತಮಿ ಗೌಡ, ಮಾನಸಿ ಸುಧೀರ್ ಮುಂತಾದವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!