ಕೂಗು ನಿಮ್ಮದು ಧ್ವನಿ ನಮ್ಮದು

ದೇವೆಗೌಡರು ಹುಟ್ಟುವ ಮುಂಚಿತವಾಗಿಯೇ RSS ಅಸ್ತಿತ್ವದಲ್ಲಿತ್ತು: ಈಶ್ವರಪ್ಪ

ಗದಗ: ೧೯೨೫ ರಲ್ಲಿಯೇ RSS ಅಸ್ತಿತ್ವದಲ್ಲಿತ್ತು. ಆಗ ದೇವೆಗೌಡ್ರು ಹುಟ್ಟಿರಲಿಲ್ಲ. ಹಾಗಾಗಿ ದೇವೆಗೌಡರ ಮೂಲಕ RSSಗೆ ಪ್ರಭಾವ ಬೆಳೆಸುವ ಅವಶ್ಯಕತೆ ಇಲ್ಲ ಎಂದು ಹೆಚ್.ಡಿ ದೇವೆಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ರು. ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಶ್ರೀ ಪುಟ್ಟರಾಜ ಕವಿ ಗವಾಯಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಸುದ್ದಿಗಾರರ ಜೊತೆಗೆ ಮಾತಾನಾಡಿದ ಈಶ್ವರಪ್ಪ, RSS ಬಗ್ಗೆ ಗೊತ್ತಿಲ್ಲ.

BJP ಈ ರೀತಿ ಬಿಂಬಿಸುತ್ತಿದೆ ಅನ್ನೋ ದೇವೇಗೌಡರ ಹೇಳಿಕೆಗೆ, ದೇವೇಗೌಡರ ಮೂಲಕ RSSಗೆ ವಿಶೇಷ ಪ್ರಭಾವ ಬೆಳೆಯುವ ಅವಶ್ಯಕತೆ ಇಲ್ಲ. ದೇವೆಗೌಡರು ಹುಟ್ಟುವ ಮುಂಚೆಯೇ RSS ಅಸ್ತಿತ್ವದಲ್ಲಿದೆ. ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಆನಂದವಾಗಿ ರಾಜಕಾರಣ ಮಾಡ್ಲಿ ಅಂತ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ರು. ರಾಜ್ಯದ ಜನರು JDS ಎಂದು ಮರೆಯುತ್ತಿದ್ದಾರೆ. ಮುಸ್ಲಿಂಮರನ್ನು ಸಂತೃಪ್ತಿ ಪಡಿಸಿದಂಗೂ ಆಯ್ತು, RSS ಬಗ್ಗೆ ಮಾತನಾಡಿದ್ರೆ ಪ್ರಚಾರ ಸಿಗುತ್ತದೆ ಎಂಬ ಭ್ರಮೆಯಲ್ಲಿ ಜೆಡಿಎಸ್‍ನ್ನು ಟೀಕಿಸುತ್ತಿದೆ ಅಂತಾ ತಮ್ಮ ಎಂದಿನ ದಾಟಿಯಲ್ಲೇ ಈಶ್ವರಪ್ಪ ಮಾತಿನ ಚಾಟಿ ಬೀಸಿದ್ರು.

ಸೂರ್ಯನಿಗೆ ಬೈದ್ರೆ ದೊಡ್ಡವನಾಗುತ್ತೇನೆ ಎಂಬ ಭ್ರಮೆಯಲ್ಲಿ ಕೆಲವರಿರ್ತಾರೆ. ಹಾಗೆಯೇ ಕುಮಾರಸ್ವಾಮಿ ಇದ್ದಾರೆ. ಕುಮಾರಸ್ವಾಮಿ ಎಲ್ಲಿ? RSS ಎಲ್ಲಿ? ಕಾಶ್ಮೀರ ಪಂಡಿತರ ಸಾವಿಗೆ RSS ಕಾರಣ ಅಂತಾರೆ. ಇಷ್ಟು ಕೀಳು ಮಟ್ಟದ ರಾಜಕಾರಣಕ್ಕೆ ಕುಮಾರಸ್ವಾಮಿ ಇಳೀತಾರೆ ಎಂದು ಅಂದುಕೊಂಡಿರಲಿಲ್ಲ. ಕುಮಾರಸ್ವಾಮಿಗೆ ಭಗವಂತ ಬುದ್ಧಿ ಕೊಡಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಈಶ್ವರಪ್ಪ ಹೇಳಿದ್ರು.

error: Content is protected !!