ತುಮಕೂರು: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನನಗೆ ಸಚಿವ ಸ್ಥಾನ ಬೇಡ ವೆಂದು ತುಮಕೂರು ನಗರದ BJP ಶಾಸಕ ಜ್ಯೋತಿ ಗಣೇಶ್ ಹೇಳಿದ್ರು. ಇನ್ನೂ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನನ್ನಂತವರು ಪಕ್ಷದಲ್ಲಿ ಸೇವೆ ಮಾಡಿದ ನೂರಾರು ಹಿರಿಯ ನಾಯಕರಿದ್ದಾರೆ. ಹಾಗಾಗಿ ಅಂಥವರನ್ನು ಗುರುತಿಸಿ ಪಕ್ಷ ಸಚಿವ ಸ್ಥಾನವನ್ನು ನೀಡಲಿ, ಇನ್ನೂ ನನ್ನ ಅಭಿಮಾನಿಗಳು ಯಾರೂ ಸಹ ನನ್ನ ಪರವಾಗಿ ಸೊಸಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಬಾರದ್ರು ಎಂದು ಜ್ಯೋತಿ ಗಣೇಶ ಹೇಳಿದ್ದಾರೆ.
ಇನ್ನೂ J.C ಮಾಧುಸ್ವಾಮಿಯವರು ಉತ್ತಮ ಸಂಸದೀಯ ಮತ್ತು ಮಾಧುಸ್ವಾಮಿ, B.C ನಾಗೇಶ್ ಜಿಲ್ಲೆಯಲ್ಲಿ ಹಿರಿಯರಿದ್ದಾರೆ. ಹಂತವರಿಗೆ ಸಚಿವ ಸ್ಥಾನವನ್ನು ಕೊಡಬೇಕೆಂದಿದ್ದಾರೆ. ಇನ್ನೂ ಇದೇ ವೇಳೆಯಲ್ಲಿ ಬಸವರಾಜ್ ಯತ್ನಾಳ್ ಬಗ್ಗೆ ಮಾತನಾಡಿರುವ ಜ್ಯೋತಿ ಗಣೇಶ್, ಅವರು ಬಸವರಾಜ್ ಯತ್ನಾಳ್ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಹೀಗಾಗಿ ಅವರು ಬಿ.ಎಸ್ ಯಡಿಯೂರಪ್ಪನವರ ಬಗ್ಗೆ ಯಾವಾಗಲೂ ಅವಹೇಳನವಾಗಿ ಮಾತನಾಡುತ್ತಾರೆ ಎಂದು ಕೆಂಡ ಕಾರಿದ್ದಾರೆ.