ಕೂಗು ನಿಮ್ಮದು ಧ್ವನಿ ನಮ್ಮದು

ದೇಹದಲ್ಲಿ ಐರನ್ ಕೊರತೆಯನ್ನು ನೀಗಿಸುತ್ತದೆ ಈ 3 ರೀತಿಯ ಜ್ಯೂಸ್

ನಾವು ಆರೋಗ್ಯವಾಗಿದ್ದಾರೆ ಮಾತ್ರ ನಮ್ಮ ಜೀವನದಲ್ಲಿ ಎಲ್ಲವೂ ಸರಿಯಾಗಿರಲು ಸಾಧ್ಯ. ಆರೋಗ್ಯವಾಗಿರಬೇಕಾದರೆ ನಾವು ಏನು ಸೇವಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ದೇಹವು ಪೋಷಕಾಂಶಗಳ ಕೊರತೆಯಿಂದ ದುರ್ಬಲಗೊಳ್ಳಲು ಪ್ರಾರಂಭಿಸಿದರೆ, ಅನೇಕ ರೋಗಗಳಿಗೆ ಗುರಿಯಾಗಬಹುದು. ಈ ಹಿನ್ನೆಲೆಯಲ್ಲಿ ದೇಹವನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳ ಅಗತ್ಯವಿರುತ್ತದೆ. ಹೀಗಾದಾಗ ಮಾತ್ರ ದೇಹದ ಎಲ್ಲಾ ಅಂಗಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತದೆ. ಕಬ್ಬಿಣದ ಅಂಶ ಅಥವಾ ಐರನ್ ದೇಹಕ್ಕೆ ಬಹಳ ಅಗತ್ಯವಿರುವ ಅಂಶವಾಗಿದೆ.

ಐರನ್ ಕೊರತೆಯಾದರೆ ಅನೇಕ ಗಂಭೀರ ಕಾಯಿಲೆಗಳನ್ನು ಉಂಟುಮಾಡುತ್ತದೆ. ಐರನ್ ನಮ್ಮ ದೇಹದಲ್ಲಿನ ಅಂಗಗಳಿಗೆ ಆಮ್ಲಜನಕವನ್ನು ತಲುಪಿಸುವ ಕೆಲಸ ಮಾಡುತ್ತದೆ. ದೇಹದಲ್ಲಿ ಇದರ ಕೊರತೆಯಾದರೆ ಸ್ವಲ್ಪ ಕೆಲಸ ಮಾಡಿದರೂ ದಣಿವಾಗುತ್ತದೆ. ಉಸಿರಾಟದ ತೊಂದರೆ ಎದುರಾಗುತ್ತದೆ.

ಈ ಮೂರು ರೀತಿಯ ಜ್ಯೂಸ್ ಗಳನ್ನೂ ಸೇವಿಸುವ ಮೂಲಕ ಐರನ್ ಕೊರತೆಯನ್ನು ನೀಗಿಸಬಹುದಾಗಿದೆ
ಪಾಲಕ್ ಜ್ಯೂಸ್ :
ಪಾಲಕ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅಂಶ ಕಂಡುಬರುತ್ತದೆ. ಇದು ನಮ್ಮ ದೇಹಕ್ಕೆ ಐರನ್ ಅನ್ನು ಪೂರೈಸಲು ಸಹಾಯ ಮಾಡುತ್ತದೆ. ಪಾಲಕ್ ಜ್ಯೂಸ್ ಮಾಡುವಾಗ ಅದರ ರುಚಿ ಹೆಚ್ಚಿಸಲು ಅದಕ್ಕೆ ತೆಂಗಿನಕಾಯಿ, ಎಳನೀರು, ಗೋಡಂಬಿ ಮತ್ತು ಅನಾನಸ್ ಅನ್ನು ಸೇರಿಸಬಹುದು. ಈ ಜ್ಯೂಸ್ ಅನ್ನು ಪ್ರತಿದಿನ ಸೇವಿಸಿದರೆ ದೇಹಕ್ಕೆ ಅಗತ್ಯವಿರುವ ಐರನ್ ಸಿಗುತ್ತದೆ

ಬಟಾಣಿ ಪ್ರೋಟೀನ್ ಶೇಕ್: ಬಟಾಣಿ ಪ್ರೋಟೀನ್ ಶೇಕ್‌ ಸೇವಿಸುವುದರ ಮೂಲಕ ಕೂಡಾ ದೇಹದಲ್ಲಿನ ಐರನ್ ಕೊರತೆಯನ್ನು ನಿವಾರಿಸಬಹುದು. ಅದರಲ್ಲಿ ಐರನ್ ಪ್ರಮಾಣವು ಅಧಿಕವಾಗಿರುತ್ತದೆ. ಆದರೆ ಇದರಲ್ಲಿ ಯಾವುದೇ ಕಾರಣಕ್ಕೂ ಸಕ್ಕರೆಯನ್ನು ಬಳಸಬಾರದು ಎನ್ನುವುದನ್ನು ಮರೆಯಬಾರದು

ಬೀಟ್ರೂಟ್ ಜ್ಯೂಸ್ :
ಬೀಟ್ರೂಟ್ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಬಳಸುವುದರಿಂದ ದೇಹದ ಐರನ್ ಕೊರತೆಯನ್ನು ನೀಗಿಸಬಹುದು. ಇದು ಐರನ್ ಜೊತೆಗೆ, ಪೊಟ್ಯಾಸಿಯಮ್, ಫೋಲೇಟ್ ಮತ್ತು ವಿಟಮಿನ್ ಸಿ ಕೊರತೆಯನ್ನು ಕೂಡಾ ನೀಗಿಸುತ್ತದೆ

error: Content is protected !!